Asianet Suvarna News Asianet Suvarna News

ಬಿಗ್ 3: ನಿರಾಶ್ರಿತರಿಗೆ ಮನೆ ಕೊಡಿಸುವಲ್ಲಿ ಯಶಸ್ವಿ!

ನಿರಾಶ್ರಿತರ ಹೋರಾಟಕ್ಕೆ ಬಿಗ್ 3 ಸಾಥ್

ನಿರಾಶ್ರಿತರಿಗೆ ಮನೆ ಕೊಡಿಸುವಲ್ಲಿ ಯಶಸ್ವಿ

ಸುಡಗಾಡು ಸಿದ್ದರಿಗೆ ಸೂರು ಕಲ್ಪಿಸಿದ ವರದಿ

ಹೊಳಲ್ಕೆರೆ(ಜು.14): ಇಲ್ಲಿನ ರಾಮಗಿರಿ ಬಡಾವಣೆಯ ನಿರಾಶ್ರಿತರ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುವಲ್ಲಿ ಕೊನೆಗೂ ಬಿಗ್ 3 ಯಶಸ್ವಿಯಾಗಿದೆ. ನಿರಾಶ್ರಿತರಿಗೆಂದೇ ಸುಮಾರು ೧೦೦ ಮನೆ ಕಟ್ಟಿಸಿದ್ದರೂ ಯಾವುದೇ ಪ್ರಯೋಜನವಾಗದ ಬಗ್ಗೆ ಬಿಗ್ 3  ವರದಿ ಮಾಡಿತ್ತು.

ಅಲ್ಲದೇ ನಿವೇಶನ ಕೊಡಿಸುವುದಾಗಿ ಭರವಸೆ ನೀಡಿ ಸ್ಥಳೀಯ ಸುಡಗಾಡು ಸಿದ್ದ ಜನಾಂಗದವರನ್ನು ಒಕ್ಕಲೆಬ್ಬಿಸಲಾಗಿತ್ತು. ಈ ಕುರಿತು ಬಿಗ್ 3 ನಲ್ಲಿ ವರದಿ ಪ್ರಸಾರವಾಗುತ್ತಿದ್ದಂತೇ ಎಚ್ಚೆತ್ತ ಸಮಾಜ ಕಲ್ಯಾಣ ಇಲಾಖೆ ರೂ. 54 ಲಕ್ಷ ರೂ. ವೆಚ್ಛದಲ್ಲಿ 29 ಕುಟುಂಬಗಳಿಗೆ ನಿವೇಶನ ಕೊಡಿಸಲು ಮುಂದಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories