ಮೊಟ್ಟೆ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಮೊಟ್ಟೆ ನೀಡುವುದನ್ನ ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಯನ್ನ ವಿಚಾರಿಸಿದಾಗ, ಬೆಳಗ್ಗೆಯೇ ಮೊಟ್ಟೆಯನ್ನು ನೀಡಿದ್ದೇವೆ ಎಂದು ಹೇಳುತ್ತಾರೆ. ಆದರೆ 2 ದಿನಗಳಿಂದ ಮೊಟ್ಟೆ ನೀಡುವವರೇ ಬರುತ್ತಿಲ್ಲ. ಬ್ರೆಡ್, ಹಾಲು, ಬಾಳೆ ಹಣ್ಣನ್ನು ಮಾತ್ರ ನೀಡುತ್ತಿದ್ದಾರೆಂದು ಹೇಳುತ್ತಾರೆ ಇಲ್ಲಿರುವ ತಾಯಂದಿರು.
ಬೀದರ್(ಡಿ.3): ಬೀದರ್ ಜಿಲ್ಲಾಸ್ಪತ್ರೆಯ ಮತ್ತೊಂದು ಕರ್ಮಕಾಂಡ ಈಗ ಬಯಲಾಗಿದೆ. ಮೊಟ್ಟೆ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಮೊಟ್ಟೆ ನೀಡುವುದನ್ನ ಸ್ಥಗಿತಗೊಳಿಸಿದ್ದಾರೆ.
ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಯನ್ನ ವಿಚಾರಿಸಿದಾಗ, ಬೆಳಗ್ಗೆಯೇ ಮೊಟ್ಟೆಯನ್ನು ನೀಡಿದ್ದೇವೆ ಎಂದು ಹೇಳುತ್ತಾರೆ. ಆದರೆ ವಾರ್ಡ್ ಕಡೆ ಮುಖ ಮಾಡಿದಾಗ, ಸತ್ಯ ಬಯಲಾಗಿದೆ. 2 ದಿನಗಳಿಂದ ಮೊಟ್ಟೆ ನೀಡುವವರೇ ಬರುತ್ತಿಲ್ಲ. ಬ್ರೆಡ್, ಹಾಲು, ಬಾಳೆ ಹಣ್ಣನ್ನು ಮಾತ್ರ ನೀಡುತ್ತಿದ್ದಾರೆಂದು ಹೇಳುತ್ತಾರೆ ಇಲ್ಲಿರುವ ತಾಯಂದಿರು.
ಇದಿಷ್ಟೆ ಅಲ್ಲ ಒಳ ರೋಗಿಗಳಿಗೆ ಸರ್ಕಾರದಿಂದ ನೀಡುವ ಊಟ ನೋಡಿದರೆ ಪ್ರಾಣಿಗಳೂ ಕೂಡ ತಿನ್ನದಷ್ಟು ಕಳಪೆಯಾಗಿದೆ. ನೀರಿನಲ್ಲಿ ಸ್ವಲ್ಪ ಉಪ್ಪು, ಖಾರ ಬಿಟ್ಟರೆ ಸಾಂಬಾರ್ನಲ್ಲಿ ಏನೂ ಇರುವುದಿಲ್ಲ. ಉಪ್ಪಿನ ಡಬ್ಬಿಯಲ್ಲಿ ಉಪ್ಪು ಕೂಡ ಇಲ್ಲದಂಥ ಸ್ಥಿತಿ ಜಿಲ್ಲಾಸ್ಪತ್ರೆಯಲ್ಲಿ ನಿರ್ಮಾಣವಾಗಿದೆ.
