ಬೆಂಗಳೂರು, ಬಳ್ಳಾರಿ, ಬೆಳಗಾವಿ , ಕಲಬುರಗಿ ಸೇರಿ ರಾಜ್ಯದ ನಾಲ್ಕು ಕಡೆಗಳಲ್ಲಿ ಭೀಮಾ ನಾಯ್ಕ್‌`ಗೆ ಸೇರಿದೆ ಎನ್ನಲಾದ ಮನೆಗಳ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು(ಡಿ.16): ಬ್ಲ್ಯಾಕ್ ಅಂಡ್ ವೈಟ್ ಮನಿ ದಂಧೆ ಹಾಗೂ ತನ್ನ ಕಾರು ಚಾಲಕನ ಆತ್ಮಹತ್ಯೆ ಪ್ರಕರಣದಡಿ ಬಂಧಿತನಾಗಿರುವ ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾ ನಾಯ್ಕ್ಗೆ ಮತ್ತೆ ಸಂಕಷ್ಟ ಎದುರಾಗಿದೆ.ರಾಜ್ಯಾದ್ಯಂತ ಭೀಮಾ ನಾಯ್ಕ್ ಅಕ್ರಮವಾಗಿ ಸಂಪಾದಿಸಿರುವ ಆಸ್ತಿಗಳ ಮೇಲೆ ಎಸಿಬಿ ಅಧಿಕಾರಿಗಳು ಇಂದು ಏಕ ಕಾಲಕ್ಕೆ ದಾಳಿ ನಡೆಸಿದ್ದಾರೆ.
ಬೆಂಗಳೂರು, ಬಳ್ಳಾರಿ, ಬೆಳಗಾವಿ , ಕಲಬುರಗಿ ಸೇರಿ ರಾಜ್ಯದ ನಾಲ್ಕು ಕಡೆಗಳಲ್ಲಿ ಭೀಮಾ ನಾಯ್ಕ್`ಗೆ ಸೇರಿದೆ ಎನ್ನಲಾದ ಮನೆಗಳ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಬ್ಲ್ಯಾಕ್ ಅಂಡ್ ವೈಟ್ ದಂಧೆ ಮೂಲಕ 100 ಕೋಟಿ ಹಣವನ್ನು, ಜನಾರ್ದನರೆಡ್ಡಿ ಮಗಳ ಮದುವೆಗೆ ಕೊಟ್ಟ ಆರೋಪದ ಹಿನ್ನೆಲೆ ಈಗಾಗಲೇ ಭೀಮಾನಾಯ್ಕ್ ಸಿಐಡಿ ವಶದಲ್ಲಿದ್ದಾರೆ. ಕೆಎಎಸ್ ಅಧಿಕಾರಿಯಾಗಿರುವ ಭೀಮಾನಾಯ್ಕ್ ಆದಾಯ ಮೀರಿ ಆಸ್ತಿ ಗಳಿಕೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಭೀಮಾನಾಯ್ಕ್ ಗೆ ಸೇರಿರುವ ಬೆಂಗಳೂರಿನ ಯಲಹಂಕ ಮತ್ತು ಬೆಳಗಾವಿಯ ಸದಾಶಿವನಗರ ಹಾಗೂ ಕಲಬುರಗಿಯ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
ಯಲಹಂಕ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು, ಭೀಮಾನಾಯ್ಕ್ ಅಕ್ರಮ ಆಸ್ತಿ ಕಬಳಿಕೆ ಮೇಲೆ, ಭೂಸ್ವಾಧೀನ ಆಧಿಕಾರಿಗಳ ಕಣ್ಣು ಬಿದ್ದಿದೆ. ಭೀಮಾ ನಾಯ್ಕ್ ಸದ್ಯ ಸಿಐಡಿ ವಶದಲ್ಲಿದ್ದಾರೆ. ಇತ್ತ ಅವರ ಅಕ್ರಮ ಆಸ್ತಿಗಳ ಮೇಲೆ ರಾಜ್ಯಾದ್ಯಂತ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ , ಭ್ರಷ್ಟ ಅಧಿಕಾರಿಗೆ ಚಳಿ ಬಿಡಿಸಿದ್ದಾರೆ.
