ಪ್ರಧಾನಿ ನರೇಂದ್ರ ಮೋದಿ ಮಾಸ್ಟರ್ ಸ್ಟ್ರೋಕ್ ವಿರುದ್ದ ವಿಪಕ್ಷಗಳು ತಿರುಗಿಬಿದ್ದಿವೆ. ನೋಟ್ ಬ್ಯಾನ್ ನಿಂದ ಜನಸಾಮಾನ್ಯರಿಗೆ ಆಗ್ತಿರೋ ತೊಂದರೆ, ಸಂಕಟಗಳನ್ನೇ ಮುಂದಿಟ್ಟುಕೊಂಡು ಸಂಸತ್ ಒಳಗೂ, ಹೊರಗೂ ಪ್ರತಿಭಟನೆ ನಡಸುತ್ತಿವೆ. ಇದೀಗ ನೋಟ್ ಬ್ಯಾನ್ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಇದೇ 28ರಂದು ಭಾರತ್ ಬಂದ್ ಗೆ ಕರೆ ನೀಡಿವೆ.
ನವದೆಹಲಿ(ನ.23): ಪ್ರಧಾನಿ ನರೇಂದ್ರ ಮೋದಿ ಮಾಸ್ಟರ್ ಸ್ಟ್ರೋಕ್ ವಿರುದ್ದ ವಿಪಕ್ಷಗಳು ತಿರುಗಿಬಿದ್ದಿವೆ. ನೋಟ್ ಬ್ಯಾನ್ ನಿಂದ ಜನಸಾಮಾನ್ಯರಿಗೆ ಆಗ್ತಿರೋ ತೊಂದರೆ, ಸಂಕಟಗಳನ್ನೇ ಮುಂದಿಟ್ಟುಕೊಂಡು ಸಂಸತ್ ಒಳಗೂ, ಹೊರಗೂ ಪ್ರತಿಭಟನೆ ನಡಸುತ್ತಿವೆ. ಇದೀಗ ನೋಟ್ ಬ್ಯಾನ್ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಇದೇ 28ರಂದು ಭಾರತ್ ಬಂದ್ ಗೆ ಕರೆ ನೀಡಿವೆ.
ನವೆಂಬರ್ 28ರಂದು ಭಾರತ ಬಂದ್‌ಗೆ ಕರೆ
500, 1000 ರೂಪಾಯಿ ನೋಟುಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಒಂದಾಗಿವೆ. ಸಂಸತ್ ಒಳಗೂ, ಹೊರಗೂ ಮೋದಿ ವಿರುದ್ಧ ತಿರುಗಿಬಿದ್ದಿವೆ. ನೋಟ್ ಬ್ಯಾನ್ ಕ್ರಮ ಹಿಂದಕ್ಕೆ ವಾಪಸ್ ಪಡೆಯುವಂತೆ ಬಿಗಿಪಟ್ಟು ಹಿಡಿದಿರುವ ವಿಪಕ್ಷಗಳು, ನವೆಂಬರ್ 28ರಂದು ಆಕ್ರೋಶ್ ದಿವಸ್ ಆಚರಣೆಗೆ ಕರೆ ನೀಡಿವೆ.
ನೋಟು ನಿಷೇಧದಿಂದ ಜನಸಾಮಾನ್ಯರು ತೊಂದರೆ ಒಳಗಾಗಿದ್ದು, ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರತಿಭಟನೆಗೆ ನಿರ್ಧರಿಸಲಾಗಿದೆ. ಅಲ್ಲದೇ ಪ್ರತ್ಯೇಕವಾಗಿ ಆಯಾ ಪಕ್ಷಗಳ ಕಾರ್ಯಕರ್ತರಿಗೆ ಪ್ರತಿಭಟನೆ ಮತ್ತು ಧರಣಿ ನಡೆಸಲು ಸೂಚನೆ ನೀಡಲಾಗಿದೆ..
