Asianet Suvarna News Asianet Suvarna News

ವಿವಿಧ ಜಿಲ್ಲೆಗಳಲ್ಲಿ ಹೇಗಿದೆ ಭಾರತ್ ಬಂದ್ ಬಿಸಿ?

ತೈಲ ಬೆಲೆ ಏರಿಕೆ ಖಂಡಿಸಿ ಇಂದು ದೇಶದಲ್ಲಿ ವಿಪಕ್ಷಗಳು ಬಂದ್ ಗೆ ಕರೆ ನೀಡಿದ್ದು ವಿವಿಧ ಜಿಲ್ಲೆಗಳಲ್ಲಿ ಬಂದ್ ಪ್ರಭಾವ ಹೆಚ್ಚಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. 

Bharat Bandh Congress Leaders Protest In Many Districts
Author
Bengaluru, First Published Sep 10, 2018, 7:45 AM IST

ಬೆಂಗಳೂರು :  ಪೆಟ್ರೋಲ್ , ಡೀಸೆಲ್ ಬೆಲೆ ಏರಿಕೆ ಖಂಡಿಸಿ ವಿಪಕ್ಷಗಳು ಭಾರತ್ ಬಂದ್ ಗೆ ಕರೆ ನೀಡಿದ್ದು, ವಿವಿಧ ಜಿಲ್ಲೆಗಳು ಹಾಗೂ ರಾಜ್ಯದಲ್ಲಿ ಬಂದ್ ಬಿಸಿ ಏರುತ್ತಿದೆ. ಈಗಾಗಲೇ ಹಲವು ಕಡೆ ಪ್ರತಿಭಟನೆ ನಡೆಸಲಾಗುತ್ತಿದೆ. ವಿವಿಧ ಜಿಲ್ಲೆಗಳಲ್ಲಿ ಬಂದ್ ಬಿಸಿ ತಟ್ಟುತ್ತಿದೆ. 

ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಚನ್ನಪಟ್ಟಣದ ಗಾಂಧಿ ಭವನ ಮುಂಭಾಗದಿಂದ ಅಂಚೆ ಕಚೇರಿ ರಸ್ತೆಯ ಕಾವೇರಿ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಗುತ್ತಿದೆ. 

ಬಳ್ಳಾರಿ ರೈಲು ನಿಲ್ದಾಣದ ಬಳಿ ಟೈರ್ ಗೆ ಬೆಂಕಿ ಹಾಕಿ  ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. 

ಉಡುಪಿಯಲ್ಲಿಯೂ ಬಿಸಿ ತಟ್ಟಿದ್ದು, ಕೇರಳ ಪ್ರಯಾಣಿಕರನ್ನು ಬಸ್ ನಿಂದ ಅರ್ಧದಲ್ಲೇ ಇಳಿಸಲಾಗಿದೆ.  

ಧಾರವಾಡದಲ್ಲಿಯೂ ಕಾಂಗ್ರೆಸ್ ಬಂದ್ ಗೆ ಕರೆ ನೀಡಿದೆ.  ಬಂದ್ ಗೆ ಬೆಂಬಲ ನೀಡಿದ ವಿವಿಧ ಕನ್ನಡಪರ ಹಾಗೂ ಪ್ರಗತಿಪರ ಸಂಘಟನೆಗಳು

ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ಖಂಡಿಸಿ ಭಾರತ್ ಬಂದ್ ಹಿನ್ನೆಲೆ. ಮೈಸೂರು ಗ್ರಾಮಂತರ ನಿಲ್ದಾಣದಿಂದ ಚಲಿಸುತ್ತಿದ್ದ 2,700 ಬಸ್ ಸಂಚಾರ ಸ್ಥಗಿತವಾಗಿವೆ. 

ಕರ್ನಾಟಕ -ತಮಿಳುನಾಡು ಗಡಿ ಅತ್ತಿಬೆಲೆಯಲ್ಲಿ ಭಾರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ತೈಲ ಬೆಲೆ ವಿರೋಧಿಸಿ ಭಾರತ್ ಬಂದ್ ಹಿನ್ನಲೆ ಖಾಸಗಿ ಆಸ್ಪತ್ರೆಗಳಿಂದ ನೈತಿಕ ಬೆಂಬಲ ನೀಡಿದ್ದು, ಎಂದಿನಂತೆ ಖಾಸಾಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು ಕಾರ್ಯ ನಿರ್ವಹಣೆ ಮಾಡಲಿವೆ.  

ಚಿತ್ರದುರ್ಗ ದಲ್ಲಿ ಆಟೋ ರಿಕ್ಷಾ, KSRTC ಬಸ್ ಗಳು ರಸ್ತೆಗಿಳಿದ ಹಿನ್ನೆಲೆ ಕೈ ಮುಗಿದು ಕಾರ್ಯಕರ್ತರು ಬಂದ್ ಗೆ ಸಹಕರಿಸಲು ಮನವಿ ಮಾಡಿದ್ದಾರೆ. ಮಂಡ್ಯ, ಹುಬ್ಬಳ್ಳಿ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಂದ್ ನಡೆಸಲಾಗುತ್ತಿದೆ.

Follow Us:
Download App:
  • android
  • ios