ಮೊದಲ ಪತ್ನಿಗೆ ವಂಚಿಸಿ 2 ನೇ ಮದುವೆಗೆ ಮುಂದಾದ ಪತಿ ಮಹಾಶಯನಿಗೆ ಮೊದಲ ಪತ್ನಿ ಮಾಡಿದ್ದೇನು?

Betrayed wife stops husband's 2 nd marriage
Highlights

ಮೊದಲ ಪತ್ನಿಗೆ ವಂಚಿಸಿ 2 ನೇ ಮದುವೆಗೆ ಮುಂದಾಗಿದ್ದ ಪತಿ ಮಹಾಶಯನಿಗೆ  ಮೊದಲ ಪತ್ನಿ ಶಾಕ್ ನೀಡಿದ್ದಾರೆ.  ದಾವಣಗೆರೆ ಮೂಲದ ಜಗದೀಶ್ ಮೊದಲ ಪತ್ನಿಯನ್ನು  ಬಿಟ್ಟು ಬೇರೆ ಮದುವೆಯಾಗಲು ಮುಂದಾಗಿದ್ದರು. ಜಗದೀಶ್ ಹಾಗೂ ಶ್ರೀದೇವಿ ವರ್ಷಗಳ ಹಿಂದೆ ಮದುವೆಯಾಗಿದ್ದರು.  ಆದರೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು.  ಹೀಗಾಗಿ, ಜಗದೀಶ್ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ. ಆದರೆ, ವಿಚ್ಛೇದನ ಸಿಗುವುದಕ್ಕಿಂತ ಮುಂಚೆಯೇ ಮತ್ತೊಂದು ಮದುವೆಗೆ ಮುಂದಾಗಿದ್ದಾರೆ. 

ದಾವಣಗೆರೆ (ಜೂ. 14):  ಮೊದಲ ಪತ್ನಿಗೆ ವಂಚಿಸಿ 2 ನೇ ಮದುವೆಗೆ ಮುಂದಾಗಿದ್ದ ಪತಿ ಮಹಾಶಯನಿಗೆ  ಮೊದಲ ಪತ್ನಿ ಶಾಕ್ ನೀಡಿದ್ದಾರೆ. 

ಮದುವೆಯಾಗುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಚೌಲ್ಟ್ರಿಗೆ ಆಗಮಿಸಿ ಮದುವೆ ನಿಲ್ಲಿಸಿದ್ದಾಳೆ.  ರಕ್ಷಣೆ ಕೋರಿ ಮದುಮಗ ಪೊಲೀಸ್ ಮೊರೆ ಹೋಗಿದ್ದಾರೆ.  ದಾವಣಗೆರೆಯ ಆರ್ ಎಚ್ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದೆ. 

ದಾವಣಗೆರೆ ಮೂಲದ ಜಗದೀಶ್ ಮೊದಲ ಪತ್ನಿಯನ್ನು  ಬಿಟ್ಟು ಬೇರೆ ಮದುವೆಯಾಗಲು ಮುಂದಾಗಿದ್ದರು. ಜಗದೀಶ್ ಹಾಗೂ ಶ್ರೀದೇವಿ ವರ್ಷಗಳ ಹಿಂದೆ ಮದುವೆಯಾಗಿದ್ದರು.  ಆದರೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು.  ಹೀಗಾಗಿ, ಜಗದೀಶ್ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ. ಆದರೆ, ವಿಚ್ಛೇದನ ಸಿಗುವುದಕ್ಕಿಂತ ಮುಂಚೆಯೇ ಮತ್ತೊಂದು ಮದುವೆಗೆ ಮುಂದಾಗಿದ್ದಾರೆ.  

ಇಂದು ಬೇರೆ ಯುವತಿಯೊಂದಿಗೆ ಮದುವೆ ನಡೆಯಬೇಕಿತ್ತು. ವಿಷಯ ಗೊತ್ತಾಗಿ ಮೊದಲ ಪತ್ನಿ ಶ್ರೀದೇವಿ ಕಲ್ಯಾಣ ಮಂಟಪಕ್ಕೆ ಬಂದು ಮದುವೆ ನಿಲ್ಲಿಸಿದ್ದಾರೆ. ಬಳಿಕ ಜಗದೀಶ್ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ. 

ನಾನು ಜಗದೀಶ್’ನನ್ನು ಓದಿಸಿದ್ದೇನೆ. ಆತ ತನ್ನನ್ನು ಬಳಸಿಕೊಂಡಿದ್ದಾನೆ. ಕೇಳಿದಾಗ ಹಣ ನೀಡದೇ ಇದ್ದಿದ್ದಕ್ಕೆ ಕೊಲೆ ಯತ್ನವನ್ನು ನಡೆಸಿದ್ದ. ಇಬ್ಬರ ನಡುವೆ ಸಾಮರಸ್ಯವಿಲ್ಲದೇ ವಿಚ್ಛೇದನಕ್ಕೆ ಕೋರಿದ್ದ.  ಈಗ ಅದು ಇತ್ಯರ್ಥವಾಗುವ ಮುಂಚೆಯೇ ಬೇರೆ ಮದುವೆಗೆ ಮುಂದಾಗಿದ್ದಾನೆ. ತನಗೆ ನ್ಯಾಯ ಬೇಕು ಎಂದು ಶ್ರೀದೇವಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.   

loader