ಬೆಂಗಳೂರಿನ ಎಲ್ಲಾ ಟ್ರಾಫಿಕ್ ಸಿಗ್ನಲ್’ಗಳಿಗೂ ಇನ್ನು ಟೈಮರ್ ಅಳವಡಿಕೆ

First Published 5, Mar 2018, 12:25 PM IST
Bengaluru Traffic Signals Get Timers
Highlights

ಬೆಂಗಳೂರಿನ ವಿವಿಧ ಟ್ರಾಫಿಕ್ ಸಿಗ್ನಲ್’ಗಳಲ್ಲಿ ಇನ್ನುಮುಂದೆ ಎಷ್ಟೊತ್ತಿಗೆ ಸಿಗ್ನಲ್ ಬಿಡುತ್ತೆ ಎಂದು ತಲೆ ಬಿಸಿ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ಯಾಕೆಂದರೆ ಎಲ್ಲಾ ಟ್ರಾಫಿಕ್ ಸಿಗ್ನಲ್’ಗಳಲ್ಲಿಯೂ ಕೂಡ ಸರ್ಕಾರ ಟೈಮರ್ ಅಳವಡಿಕೆ ಮಾಡಲು ಹಣವನ್ನು ಬಿಡುಗಡೆ ಮಾಡಿದೆ.

ಬೆಂಗಳೂರು : ಬೆಂಗಳೂರಿನ ವಿವಿಧ ಟ್ರಾಫಿಕ್ ಸಿಗ್ನಲ್’ಗಳಲ್ಲಿ ಇನ್ನುಮುಂದೆ ಎಷ್ಟೊತ್ತಿಗೆ ಸಿಗ್ನಲ್ ಬಿಡುತ್ತೆ ಎಂದು ತಲೆ ಬಿಸಿ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ಯಾಕೆಂದರೆ ಎಲ್ಲಾ ಟ್ರಾಫಿಕ್ ಸಿಗ್ನಲ್’ಗಳಲ್ಲಿಯೂ ಕೂಡ ಸರ್ಕಾರ ಟೈಮರ್ ಅಳವಡಿಕೆ ಮಾಡಲು ಹಣವನ್ನು ಬಿಡುಗಡೆ ಮಾಡಿದೆ.

ಇದರಿಂದ ಅತ್ಯಂತ ಹೆಚ್ಚಿನ ಟ್ರಾಫಿಕ್ ಇರುವ ಸಂದರ್ಭದಲ್ಲಿ ವಾಹನಗಳನ್ನು ಸುಮ್ಮನೆ ಆನ್ ಮಾಡಿಕೊಂಡು ನಿಲ್ಲುವ ರಗಳೆ ತಪ್ಪಲಿದ್ದು, ಟೈಮರ್’ಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಇಂಧನ  ಉಳಿತಾಯವೂ ಕೂಡ ಗಲಿದೆ.

ಅಲ್ಲದೇ ವಾಹನಗಳು ಆನ್ ಆಗಿ ಇರುವುದರಿಂದ  ಆಗುವಂತಹ ಅತ್ಯಧಿಕ ಪ್ರಮಾಣದ ಮಾಲಿನ್ಯವೂ ಕೂಡ ತಪ್ಪಲಿದೆ. ಬೆಂಗಳೂರಿನಲ್ಲಿ ಪೀಕ್ ಅವರ್’ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಹನ ಸಂಚಾರವಿರುತ್ತದೆ. ಇಂತಹ ಸಂದರ್ಭದಲ್ಲಿ ಟೈಮರ್’ಗಳು ಇಲ್ಲದಿದ್ದಲ್ಲಿ ಎಷ್ಟು ಸಂದರ್ಭದವರೆಗೂ ನಿಲ್ಲಬೇಕಾಗುತ್ತದೆ ಎನ್ನುವ ಸರಿಯಾದ ಅಂದಾಜು ಕೂಡ ಇರುವುದಿಲ್ಲ.

ಆದರೆ ಟೈಮರ್ ಅಳವಡಿಕೆಯಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ದೊರಕಿದಂತಾಗುತ್ತದೆ.  ಇದೀಗ ಬೆಂಗಳೂರಿನ ಎಲ್ಲಾ ಸಿಗ್ನಲ್’ಗಳಿಗೂ ಟೈಮರ್ ಅಳವಡಿಕೆ ಮಾಡಲು ಸರ್ಕಾರ ಹಣವನ್ನು ಬಿಡುಗಡೆ ಮಾಡಿದೆ.

 

loader