Asianet Suvarna News Asianet Suvarna News

ಸಾಮಾಜಿಕ ಕಳಕಳಿ ಮೆರೆದ ಬೆಂಗಳೂರು ಟ್ರಾಫಿಕ್ ಪೊಲೀಸರು

ಕೇವಲ ಸಂಚಾರ ನಿರ್ವಹಣೆ ಮಾತ್ರವಲ್ಲ, ರಸ್ತೆಯಲ್ಲಿ ಬಿದ್ದಿದ್ದ ಗುಂಡಿ ಮುಚ್ಚಿ, ಅಪಘಾತ ತಪ್ಪಿಸಲು ಯತ್ನಿಸುತ್ತಿದ್ದ ನಗರ ಸಂಚಾರ ಪೊಲೀಸರು ಇದೀಗ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಬೇಸಿಗೆ ಸಮೀಪಿಸಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಾರ್ವಜನಿಕರಿಗೆ ರಿಚ್‌ಮಂಡ್ ವೃತ್ತದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಮೂಲಕ ಸಾರ್ವಜನಿಕರಿಂದ ಮೆಚ್ಚುಗೆಗೆ ಅಶೋಕ ನಗರ ಸಂಚಾರ ಠಾಣೆ ಪೊಲೀಸರು ಪಾತ್ರರಾಗಿದ್ದಾರೆ.

Bengaluru Traffic Police Good Work

ಬೆಂಗಳೂರು:ಕೇವಲ ಸಂಚಾರ ನಿರ್ವಹಣೆ ಮಾತ್ರವಲ್ಲ, ರಸ್ತೆಯಲ್ಲಿ ಬಿದ್ದಿದ್ದ ಗುಂಡಿ ಮುಚ್ಚಿ, ಅಪಘಾತ ತಪ್ಪಿಸಲು ಯತ್ನಿಸುತ್ತಿದ್ದ ನಗರ ಸಂಚಾರ ಪೊಲೀಸರು ಇದೀಗ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಬೇಸಿಗೆ ಸಮೀಪಿಸಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಾರ್ವಜನಿಕರಿಗೆ ರಿಚ್‌ಮಂಡ್ ವೃತ್ತದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಮೂಲಕ ಸಾರ್ವಜನಿಕರಿಂದ ಮೆಚ್ಚುಗೆಗೆ ಅಶೋಕ ನಗರ ಸಂಚಾರ ಠಾಣೆ ಪೊಲೀಸರು ಪಾತ್ರರಾಗಿದ್ದಾರೆ.

ಅಶೋಕನಗರ ಸಂಚಾರ ಠಾಣೆ ಪೊಲೀಸರ ಕಾರ್ಯಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. ಎಎಸ್‌ಐ ನಾಗೇಶ್ ರಾವ್ (ಸಹಾಯ ಪೊಲೀಸ್ ಇಬ್ ಇನ್ಸ್‌ಪೆಕ್ಟರ್) ಹಲವು ವರ್ಷಗಳಿಂದ ಅಶೋಕ ನಗರ ಸಂಚಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿ ಸುತ್ತಿದ್ದಾರೆ.

ಬಿಸಿಲಿನ ನಡುವೆ ರಸ್ತೆಯಲ್ಲಿ ನಡೆದು ಹೋಗುವ ಪಾದಚಾರಿಗಳಿಗೆ ಬಾಯಾರಿಕೆ ನಿವಾರಿಸಬೇಕೆಂದು ನಾಗೇಶ್ ರಾವ್ ಯೋಚಿಸಿದ್ದರು. ಅದರಂತೆ ಠಾಣಾ ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನೊಂದಿಗೆ ರಿಚ್‌ಮಂಡ್ ವೃತ್ತದಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಸ್ವಂತ ಖರ್ಚಿನಿಂದ ನಾಗೇಶ್ ರಾವ್ ನೀರಿಗೆ ತಗಲುವ ವೆಚ್ಚ ಭರಿಸುತ್ತಿದ್ದಾರೆ.

Follow Us:
Download App:
  • android
  • ios