ರಾಷ್ಟ್ರದ 8 ಮಹಾನಗರಗಳಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ ಬೆಂಗಳೂರಿನಲ್ಲೇ ಅತಿ ಹೆಚ್ಚು ವಾಹನ ಸವಾರರು ಮೊಬೈಲ್‌ ಬಳಕೆ ಮಾಡುತ್ತಾರೆ ಎಂಬುದು ತಿಳಿದುಬಂದಿದೆ.

ನವದೆಹಲಿ: ಸಿಲಿಕಾನ್‌ ಸಿಟಿ ಬೆಂಗಳೂರು ನಗರದಲ್ಲಿ ಶೇಕಡ 83 ಮಂದಿ ವಾಹನ ಚಾಲನೆ ಸಂದರ್ಭದಲ್ಲೂ ಮೊಬೈಲ್‌ ಬಳಕೆ ಮಾಡುತ್ತಾರೆ ಎಂಬ ಆತಂಕಕಾರಿ ಅಂಶ ‘ಸೇವ್‌ ಲೈಫ್‌' ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಬಯಲಾಗಿದೆ. ರಾಷ್ಟ್ರದ 8 ಮಹಾನಗರಗಳಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ ಬೆಂಗಳೂರಿನಲ್ಲೇ ಅತಿ ಹೆಚ್ಚು ವಾಹನ ಸವಾರರು ಮೊಬೈಲ್‌ ಬಳಕೆ ಮಾಡುತ್ತಾರೆ ಎಂಬುದು ತಿಳಿದುಬಂದಿದೆ.

ಇದಾದ ಬಳಿಕ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ಶೇ.70 ಮಂದಿ ವಾಹನ ಚಾಲನೆ ವೇಳೆ ಮೊಬೈಲ್‌ ಬಳಸುತ್ತಾರೆ. ವಾಹನ ಚಾಲನೆ ವೇಳೆ ಶೇ.14 ಮಂದಿ ಮಾತ್ರ ಮೊಬೈಲ್‌ ಬಳಕೆ ಮಾಡುವ ಜೈಪುರ ನಗರ ಸುರಕ್ಷತಾ ನಗರ ಎಂಬ ಖ್ಯಾತಿ ಪಡೆ ದಿದೆ. ಇದನ್ನು ಹೊರತು ಪಡಿಸಿದರೆ, ಮುಂಬೈ ಶೇ. 65, ಕಾನ್ಪುರ ಶೇ.58 ಮತ್ತು ದೆಹಲಿಯಲ್ಲಿ ಶೇ.47, ಚೆನ್ನೈ ಶೇ.36 ಮತ್ತು ಮಂಗಳೂರಿನಲ್ಲಿ ಶೇ.41 ಮಂದಿ ರಸ್ತೆ ಮಧ್ಯೆದಲ್ಲೇ ಮೊಬೈಲ್‌ನಲ್ಲಿ ಬಂದ ಸಂದೇಶ ಮತ್ತು ಕರೆಗಳನ್ನು ಸ್ವೀಕಾರ ಮಾಡುತ್ತಾರೆ.

(ಸಾಂದರ್ಭಿಕ ಚಿತ್ರ)