ನವದೆಹಲಿ : ಭಾರತದ ಐಟಿ ಹಬ್ ಎಂದೇ ಪ್ರಖ್ಯಾತವಾಗಿರುವ ಬೆಂಗಳೂರು ಮನೆ ಕೊಳ್ಳುವವರ ಮೊದಲ ಆಯ್ಕೆಯ  ನಗರವಾಗಿದೆ. 

ಬೆಸ್ಟ್ ಪ್ರಾಕ್ಟೀಸ್ 2019 ವರದಿಯ ಪ್ರಕಾರವಾಗಿ  ಎಲ್ಲಾ ವಿಚಾರದಲ್ಲಿಯೂ ಕೂಡ ಅತ್ಯಂತ ಹೆಚ್ಚು ಕಂಫರ್ಟ್ ನೆಸ್ ಇರುವಂತಹ ಬೆಂಗಳೂರಲ್ಲಿ ಮನೆಕೊಳ್ಳಲು ಹೆಚ್ಚು ಜನರು ಬಯಸುತ್ತಾರೆ. 

ಅಲ್ಲದೇ ಇಲ್ಲಿನ ಮನೆಗಳ ಮೇಲೆ ಹಣವನ್ನು ಹೂಡಿಕೆ ಮಾಡಿದಲ್ಲಿ ಹೆಚ್ಚು ಅನುಕೂಲಕರ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಹೆಚ್ಚಿನ ಜನರು ಹೇಳಿದ್ದಾರೆ. 

ಇನ್ನು ಮನೆ ಕೊಳ್ಳಲು ಆಯ್ಕೆ ಮಾಡಿಕೊಳ್ಳುವ ನಗರದಲ್ಲಿ 2ನೆ ಸ್ಥಾನದಲ್ಲಿ ಮುಂಬೈ ಇದ್ದು, ಮೂರನೇ ಸ್ಥಾನದಲ್ಲಿ ಹೆಯದ್ರಾಬಾದ್ ಇದೆ.  ಗುರುಗ್ರಾಮ ನಾಲ್ಕನೇ ಸ್ಥಾನದಲ್ಲಿದ್ದರೆ, ಪುಣೆ, ಕೋಲ್ಕತಾ, ಅಹಮದಾಬಾದ್, ಚಂಡೀಗಢ ನಂತರದ ಸ್ಥಾನದಲ್ಲಿವೆ.

ವಿಶ್ವ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಬೆಂಗಳೂರು ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗವಕಾಶವನ್ನು ಒದಗಿಸಿಕೊಡುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆ ಜನರು ಇಲ್ಲಿ ಬಂದು ನೆಲೆಸುತ್ತಾರೆ. ಆದ್ದರಿಂದ ಇಲ್ಲಿನ ಭೂಮಿಯ ಹಣ ಹೂಡಿಕೆ ಹೆಚ್ಚಿನ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಲಾಭವನ್ನು ತಂದು ಕೊಡುವ ಭರವಸೆ ಮೇಲೆ ಜನರು ಅಧಿಕ ಹೂಡಿಕೆ ಮಾಡುತ್ತಾರೆ.