ಜಗತ್ತಿನ ಮುಂದಿನ ಟಾಪ್‌ 10 ಟೆಕ್‌ ನಗರಗಳಲ್ಲಿ ಬೆಂಗಳೂರು

Bengaluru to be top ten cities of the world soon
Highlights

ಸಿಲಿಕಾನ್‌ ಸಿಟಿ ಎಂದೇ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ಈಗ ಜಗತ್ತಿನ ಟಾಪ್‌ 10 ತಂತ್ರಜ್ಞಾನ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಅದರಲ್ಲೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ನಗರ ಬೆಂಗಳೂರು. ಕೆಪಿಎಂಜಿ ಎಂಬ ಜಾಗತಿಕ ಸಂಸ್ಥೆ ಬಿಡುಗಡೆಗೊಳಿಸಿರುವ ‘ಕ್ರಾಂತಿಕಾರಕ ತಂತ್ರಜ್ಞಾನಗಳ ಬದಲಾಗುತ್ತಿರುವ ಪ್ರದೇಶಗಳು’ ವರದಿಯಲ್ಲಿ, ಬೆಂಗಳೂರಿಗೆ ಎಂಟನೇ ಸ್ಥಾನವನ್ನು ನೀಡಲಾಗಿದೆ.

ಪಟ್ಟಿಯಲ್ಲಿರುವ ಭಾರತದ ಏಕೈಕ ನಗರವೆಂಬ ಹೆಗ್ಗಳಿಕೆ

ನವದೆಹಲಿ: ಸಿಲಿಕಾನ್‌ ಸಿಟಿ ಎಂದೇ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ಈಗ ಜಗತ್ತಿನ ಟಾಪ್‌ 10 ತಂತ್ರಜ್ಞಾನ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಅದರಲ್ಲೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ನಗರ ಬೆಂಗಳೂರು. ಕೆಪಿಎಂಜಿ ಎಂಬ ಜಾಗತಿಕ ಸಂಸ್ಥೆ ಬಿಡುಗಡೆಗೊಳಿಸಿರುವ ‘ಕ್ರಾಂತಿಕಾರಕ ತಂತ್ರಜ್ಞಾನಗಳ ಬದಲಾಗುತ್ತಿರುವ ಪ್ರದೇಶಗಳು’ ವರದಿಯಲ್ಲಿ, ಬೆಂಗಳೂರಿಗೆ ಎಂಟನೇ ಸ್ಥಾನವನ್ನು ನೀಡಲಾಗಿದೆ.

ಸಿಲಿಕಾನ್‌ ವ್ಯಾಲಿ, ಸ್ಯಾನ್‌ಫ್ರಾನ್ಸಿಸ್ಕೋ ಹೊರತುಪಡಿಸಿ, ಮುಂದಿನ 4 ವರ್ಷಗಳಲ್ಲಿ ತಾಂತ್ರಿಕತೆಯಲ್ಲಿ ಹೊಸ ಚಿಂತನೆಗಳ ಕೇಂದ್ರಗಳಾಗಿ ಯಾವ ನಗರಗಳು ಹೊರಹೊಮ್ಮಬಹುದು ಎಂದು ವಿವಿಧ ತಂತ್ರಜ್ಞಾನ ಕಂಪನಿಗಳ ನಾಯಕರನ್ನು ಪ್ರಶ್ನಿಸಿ ಈ ವರದಿ ತಯಾರಿಸಲಾಗಿದೆ. ಅದರನ್ವಯ ಚೀನಾದ ಶಾಂಘೈ ಮೊದಲನೇ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಟೋಕಿಯೊ, ಲಂಡನ್‌, ನ್ಯೂಯಾರ್ಕ್, ಬೀಜಿಂಗ್‌, ಸಿಂಗಾಪುರ ಮತ್ತು ಸಿಯೋಲ್‌ ಇವೆ. ಜಗತ್ತಿನ 800 ತಂತ್ರಜ್ಞಾನ ಉದ್ಯಮ ಮುಖ್ಯಸ್ಥರಲ್ಲಿ ಶೇ.13 ಮಂದಿ ಭಾರತದ ಮೇಲೆ ನಂಬಿಕೆಯಿಟ್ಟಿದ್ದಾರೆ. ಈ ವಿಷಯದಲ್ಲಿ ಅಮೆರಿಕ (ಶೇ.34) ಮತ್ತು ಚೀನಾ (ಶೇ.26) ಭಾರತಕ್ಕಿಂತ ಮುಂಚೂಣಿಯಲ್ಲಿವೆ.

ಭಾರತ ಜಾಗತಿಕ ಉದ್ಯಮ ವಲಯದಲ್ಲಿ ಪ್ರಮುಖ ಸಂಶೋಧನಾ ಕೇಂದ್ರವಾಗುವತ್ತ ದಾಪುಗಾಲು ಹಾಕುತ್ತಿದೆ ಎಂದು ವರದಿ ತಿಳಿಸಿದೆ. 2017ರಲ್ಲಿ ಭಾರತ ಜಾಗತಿಕ ಸಂಶೋಧನಾ ಸೂಚ್ಯಂಕದಲ್ಲಿ 60ನೇ ಸ್ಥಾನದಲ್ಲಿದೆ, 2016ರಲ್ಲಿ ಅದು 66ನೇ ಸ್ಥಾನದಲ್ಲಿತ್ತು. ಭಾರತದಲ್ಲಿ ಸ್ಟಾರ್ಟಪ್‌ಗಳು ದೇಶವನ್ನು ಜನಪ್ರಿಯ ಸಂಶೋಧನಾ ಕೇಂದ್ರವಾಗಿಸುವಲ್ಲಿ ಪ್ರಮುಖ ಪಾತ್ರ ನಿಭಾಯಿಸುತ್ತಿವೆ ಎಂದು ವರದಿ ತಿಳಿಸಿದೆ.

loader