ಸ್ವಚ್ಛ ರೈಲ್ವೆ ವಲಯಗಳ ಪಟ್ಟಿಯಲ್ಲಿ ಕರ್ನಾಟಕ, ಗೋವಾ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳನ್ನೊ ಳಗೊಂಡ ನೈಋುತ್ಯ ವಲಯ ಆರನೇ ಸ್ಥಾನದಲ್ಲಿದೆ. ಆದರೆ 332 ರೈಲ್ವೆ ನಿಲ್ದಾಣಗಳನ್ನೊಳಗೊಂಡ ‘ಎ' ವಿಭಾಗದ ರೈಲ್ವೆ ನಿಲ್ದಾಣಗಳ ಪಟ್ಟಿಯಲ್ಲಿ, ಪಂಜಾಬ್‌ನ ಬಿಯಾಸ್‌ ರೈಲ್ವೆ ನಿಲ್ದಾಣ ಮೊದಲನೇ ಸ್ಥಾನದಲ್ಲಿದ್ದು, ಕರ್ನಾಟಕದ ಯಾವುದೇ ರೈಲ್ವೆ ನಿಲ್ದಾಣ ಟಾಪ್‌ 10 ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

ನವದೆಹಲಿ(ಮೇ.18): ದೇಶದ 75 ಬ್ಯುಸಿ ರೈಲ್ವೆ ನಿಲ್ದಾಣಗಳನ್ನೊಳ ಗೊಂಡ ‘ಎ1' ವಿಭಾಗದ ರೈಲ್ವೆ ನಿಲ್ದಾಣಗಳಲ್ಲಿ ಅತ್ಯಂತ ಸ್ವಚ್ಛ ರೈಲ್ವೆ ನಿಲ್ದಾಣಗಳ ಪಟ್ಟಿಯಲ್ಲಿ ಬೆಂಗಳೂರು ಸಿಟಿ ರೈಲು ನಿಲ್ದಾಣ ಹತ್ತನೇ ಸ್ಥಾನ ಪಡೆದಿದೆ. ಆಂಧ್ರ ಪ್ರದೇಶದ ವಿಶಾಖಪಟ್ಟಣಂ ರೈಲ್ವೆ ನಿಲ್ದಾಣ ಈ ಪಟ್ಟಿಯಲ್ಲಿ ಮೊದಲನೇ ಸ್ಥಾನ ಪಡೆದಿದ್ದು, ತೆಲಂಗಾಣದ ಸಿಕಂದರಾ ಬಾದ್‌ ಎರಡನೇ ಸ್ಥಾನದಲ್ಲಿದೆ ಮತ್ತು ಮೂರನೇ ಸ್ಥಾನದಲ್ಲಿ ಜಮ್ಮು ರೈಲ್ವೆ ನಿಲ್ದಾಣ ಗುರುತಿಸಲ್ಪಟ್ಟಿದೆ.
ಸ್ವಚ್ಛ ರೈಲ್ವೆ ವಲಯಗಳ ಪಟ್ಟಿಯಲ್ಲಿ ಕರ್ನಾಟಕ, ಗೋವಾ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳನ್ನೊ ಳಗೊಂಡ ನೈಋುತ್ಯ ವಲಯ ಆರನೇ ಸ್ಥಾನದಲ್ಲಿದೆ. ಆದರೆ 332 ರೈಲ್ವೆ ನಿಲ್ದಾಣಗಳನ್ನೊಳಗೊಂಡ ‘ಎ' ವಿಭಾಗದ ರೈಲ್ವೆ ನಿಲ್ದಾಣಗಳ ಪಟ್ಟಿಯಲ್ಲಿ, ಪಂಜಾಬ್‌ನ ಬಿಯಾಸ್‌ ರೈಲ್ವೆ ನಿಲ್ದಾಣ ಮೊದಲನೇ ಸ್ಥಾನದಲ್ಲಿದ್ದು, ಕರ್ನಾಟಕದ ಯಾವುದೇ ರೈಲ್ವೆ ನಿಲ್ದಾಣ ಟಾಪ್‌ 10 ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಸಮೀಕ್ಷೆ ವರದಿಯನ್ನು ರೈಲ್ವೆ ಸಚಿವ ಸುರೇಶ್‌ ಪ್ರಭು ಬಿಡುಗಡೆಗೊಳಿಸಿದ್ದಾರೆ.
ಬ್ಯುಸಿ ರೈಲ್ವೆ ನಿಲ್ದಾಣಗಳ ವಿಭಾಗದಲ್ಲಿ ಬಿಹಾರದ ದರ್ಭಾಂಗ ರೈಲ್ವೆ ನಿಲ್ದಾಣ ಅತ್ಯಂತ ಕೊಳಕು ರೈಲ್ವೆ ನಿಲ್ದಾಣವೆಂದು ಗುರುತಿಸಲ್ಪಟ್ಟಿದೆ. ನಿಲ್ದಾಣಗಳ ಫ್ಲ್ಯಾಟ್‌ಫಾರಂ, ಹಳಿಗಳು ಮತ್ತು ಕಸದ ಡಬ್ಬಿಗಳ ಸ್ವಚ್ಛತೆಯ ಮಾನದಂಡ ಆಧರಿಸಿ ರೈಲ್ವೆ ನಿಲ್ದಾಣಗಳ ಸ್ವಚ್ಛತೆಯ ಸ್ಥಾನಗಳನ್ನು ಗುರುತಿಸಲಾಗಿದೆ. ಪ್ರಯಾಣಿಕರ ದಟ್ಟಣೆ ಹಾಗೂ ಆದಾಯ ಆಧರಿಸಿ ಎ1, ಎ ಎಂದು ನಿಲ್ದಾಣಗಳ ವರ್ಗೀಕರಣ ಮಾಡಲಾಗುತ್ತದೆ.