ಸಾಹಿತ್ಯಾಸಕ್ತರನ್ನು ಕೈ ಬೀಸಿ ಕರೆಯಲಿದೆ ’ಬೆಂಗಳೂರು- ಪುಸ್ತಕೋತ್ಸವ- 2018’

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Aug 2018, 9:01 PM IST
Bengaluru Pustakothsava-2018 held on October 15 to October 21
Highlights

ಓದುವ ಹವ್ಯಾಸ ಇತ್ತೀಚಿಗೆ ಜನರಲ್ಲಿ ಕಡಿಮೆಯಾಗುತ್ತಿದೆ. ಓದುವ ಹವ್ಯಾಸವನ್ನು ಉತ್ತೇಜಿಸಲು ಅಕ್ಟೋಬರ್ 15 ರಿಂದ 21 ರವರೆಗೆ ಒಟ್ಟು 7 ದಿನಗಳ ಕಾಲ ನಗರದ ಅರಮನೆ ಮೈದಾನದಲ್ಲಿ ಬೆಂಗಳೂರು- ಪುಸ್ತಕೋತ್ಸವ- 2018 ಆಯೋಜಿಸಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ. ಎಸ್ ಜಿ ಸಿದ್ದರಾಮಯ್ಯ ಹೇಳಿದ್ದಾರೆ.  

ಬೆಂಗಳೂರು (ಆ. 11):  ಓದುವ ಹವ್ಯಾಸ ಇತ್ತೀಚಿಗೆ ಜನರಲ್ಲಿ ಕಡಿಮೆಯಾಗುತ್ತಿದೆ. ಓದುವ ಹವ್ಯಾಸವನ್ನು ಉತ್ತೇಜಿಸಲು ಅಕ್ಟೋಬರ್ 15 ರಿಂದ 21 ರವರೆಗೆ ಒಟ್ಟು 7 ದಿನಗಳ ಕಾಲ ನಗರದ ಅರಮನೆ ಮೈದಾನದಲ್ಲಿ ಬೆಂಗಳೂರು- ಪುಸ್ತಕೋತ್ಸವ- 2018 ಆಯೋಜಿಸಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ. ಎಸ್ ಜಿ ಸಿದ್ದರಾಮಯ್ಯ ಹೇಳಿದ್ದಾರೆ. 

ಪುಸ್ತಕೋತ್ಸವಕ್ಕೆ ಮೊದಲಿನಿಂದಲೂ ಮಾಹಿತಿ ತಂತ್ರಜ್ಞಾನ, ಜೈವಿಲ ತಂತ್ರಜ್ಞಾನದ ಉದ್ಯೋಗಿಗಳು ಮತ್ತು ಆಂಗ್ಲ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ, ಕಾವ್ಯ, ಪರಂಪರೆ ಇತ್ಯಾದಿಗಳನ್ನು ಪರಿಚಯಿಸಬೇಕೆಂಬುದು ಈ ಉತ್ಸವದ ಆಶಯವಾಗಿದೆ. ಮೂರು ದಿನಗಳ ಕಾಲ ಕನ್ನಡ ಸಾಹಿತ್ಯೋತ್ಸವವನ್ನುಇದೇ ಸಂದರ್ಭದಲ್ಲಿ ಆಯೋಜಿಸಲಾಗುತ್ತಿದೆ. ಈ ಉತ್ಸವದಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಸಾಹಿತಿಗಳು ಭಾಗವಹಿಸುತ್ತಿರುವುದು ವಿಶೇಷವಾಗಿದೆ ಎಂದು ಎಸ್ ಜಿ ಸಿದ್ದರಾಮಯ್ಯ ಹೇಳಿದ್ದಾರೆ. 

350 ಮಳಿಗೆಗಳಲ್ಲಿ ಶೇ. 15 ರಿಂದ ಶೇ. 50 ರಿಯಾಯಿತಿ ದರಗಳಲ್ಲಿ ಕನ್ನಡ ಭಾಷೆಗಳ ಪುಸ್ತಕಗಳು ಮಾರಾಟಕ್ಕೆ ಲಭ್ಯವಿದೆ ಎಂದಿದ್ದಾರೆ.  

loader