ವಿಕೃತಕಾಮಿ ಬೆಂಗಳೂರಿನ ಜನರಲ್ ಪೋಸ್ಟ್ ಆಫೀಸ್ ಕಾರ್ಮಿಕ ಜು.27 ರಂದು ರಾತ್ರಿ  ಎಜಿಎಸ್ ಲೇಔಟ್ ನಲ್ಲಿ  ಮಹಿಳೆಯೊಬ್ಬರ ಮುಂದೆ ಗುಪ್ತಾಂಗ ಪ್ರದರ್ಶಿಸಿ ವಿಕೃತಿ ಮೆರೆದಿದ್ದ

ಬೆಂಗಳೂರು[ಜು.31]: ಕಾರಿನಲ್ಲಿ ಬಂದು ಹೈಫೈ ವಿಕೃತಕಾಮಿ ಮೆರೆಯುತ್ತಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಜನರಲ್ ಪೊಸ್ಟ್ ಆಫಿಸ್'ನ ಕಾರ್ಮಿಕನಾಗಿರುವ ಕಾರ್ತಿಕ್[27] ಬಂಧಿತ ಆರೋಪಿ. ಈತ ರಾತ್ರಿ ವೇಳೆ ಒಬ್ಬಂಟಿಯಾಗಿ ಓಡಾಡೊ ಯುವತಿಯರನ್ನ ಟಾರ್ಗೆಟ್ ಮಾಡಿ ಹಿಂಬಾಲಿಸಿ ಅಶ್ಲೀಲವಾಗಿ ವರ್ತಿಸುತ್ತಿದ್ದ. ಜು.27 ರಂದು ರಾತ್ರಿ ಎಜಿಎಸ್ ಲೇಔಟ್ ನಲ್ಲಿ ಯುವತಿಯೊಬ್ಬಳನ್ನು ಹಿಂಬಾಲಿಸಿ ಹುಡುಗಿಯ ಮುಂದೆ ತನ್ನ ಪ್ಯಾಂಟ್ ಜಿಪ್ ಬಿಚ್ಚಿ ಗುಪ್ತಾಂಗವನ್ನು ಪ್ರದರ್ಶಿಸಿ ವಿಕೃತಿ ಮೆರದಿದ್ದ. 

ಘಟನೆ ನಡೆದ ಯುವತಿಯ ಪೊಷಕರು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.ಎಜಿಎಸ್ ಲೇಔಟ್ ನಲ್ಲಿನ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

(ಸಾಂದರ್ಭಿಕ ಚಿತ್ರ)