14 ಲಕ್ಷ ರೂಪಾಯಿ ಮೌಲ್ಯದ ಚೆಕ್, ಕೀಬೋರ್ಡ್, ಪಪ್ಪೀಸ್, ದುಬಾರಿ ವಾಚು, ದುಬಾರಿ ಚಪ್ಪಲಿ, ಮದ್ಯಬಾಟಲಿ, ತರಕಾರಿ, ಕ್ರಿಕಟ್ ಬ್ಯಾಟ್'ಗಳನ್ನೂ ಕ್ಯಾಬ್'ನಲ್ಲಿ ಬಿಟ್ಟು ಹೋದ ಜನರುಂಟು ಎನ್ನುತ್ತದೆ ಊಬರ್ ಸರ್ವೆ.

ಕೋಲ್ಕತಾ(ಏ. 01): ಕಾರು ಬಾಡಿಗೆ ಪಡೆದು ಕೆಳಗಿಳಿಯುವಾಗ ಏನನ್ನಾದರೂ ಅಲ್ಲಿಯೇ ಬಿಟ್ಟು ಹೋಗುವ ಜಾಯಮಾನವಾ ನಿಮ್ಮದು? ಹಾಗಾದರೆ, ಬೆಂಗಳೂರಿನಲ್ಲಿ ನಿಮ್ಮಂಥವರೇ ಹೆಚ್ಚಾಗಿದ್ದಾರೆ ಬಿಡಿ..! ದೆಹಲಿ, ಮುಂಬೈ, ಕೋಲ್ಕತಾ, ಬೆಂಗಳೂರು ಮತ್ತು ಹೈದರಾಬಾದ್ ನಗರಗಳ ಪೈಕಿ ಹೆಚ್ಚು ಮರೆಗುಳಿಗಳು ಇರುವುದು ಬೆಂಗಳೂರೇ ಅಂತೆ. ಹಾಗಂತ ಊಬರ್ ಕ್ಯಾಬ್ ಸಂಸ್ಥೆಯ ಸಮೀಕ್ಷೆ ಹೇಳುತ್ತಿದೆ.

ಇತ್ತೀಚೆಗಷ್ಟೇ ಊಬರ್'ನವರು "ಲಾಸ್ಟ್ ಅಂಡ್ ಫೌಂಡ್" ಎಂಬ ಫೀಚರನ್ನು ತಮ್ಮ ಆ್ಯಪ್'ನಲ್ಲಿ ಅಳವಡಿಸಿದ್ಧಾರೆ. ಇದರಲ್ಲಿ ಗ್ರಾಹಕರು ತಾವು ವಾಹನದಲ್ಲಿ ಬಿಟ್ಟು ಹೋಗಿರುವ ವಸ್ತುಗಳನ್ನು ನಮೂದಿಸಬಹುದು. ಕ್ಯಾಬ್ ಡ್ರೈವರ್'ಗಳು ತಮಗೆ ಸಿಕ್ಕಿರುವ ವಸ್ತುಗಳ ವಿವರವನ್ನು ಈ ಫೀಚರ್'ನಲ್ಲಿ ನೀಡಬಹುದು. ಇದರ ಮಾಹಿತಿಯನ್ನಾಧರಿಸಿ, ಯಾವ್ಯಾವ ನಗರಗಳ ಊಬರ್ ಕ್ಯಾಬ್'ಗಳಲ್ಲಿ ಹೆಚ್ಚೆಚ್ಚು ವಸ್ತುಗಳು ಕಳೆದುಹೋಗಿವೆ ಎಂಬುದರ ವಿವರವನ್ನು ಸಂಸ್ಥೆ ಪಡೆದುಕೊಂಡಿವೆ.

ಅದರಂತೆ, ಬೆಂಗಳೂರಿನಲ್ಲೇ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೋಲ್ಕತಾದಲ್ಲಿ ಅತೀ ಕಡಿಮೆ ಪ್ರಕರಣಗಳಿವೆ. ಕುತೂಹಲದ ವಿಚಾರವೆಂದರೆ ಶನಿವಾರದಂದು ಹೆಚ್ಚು ವಸ್ತುಗಳು ಕಳೆದುಕೊಂಡಿರವ ಬಗ್ಗೆ ಮಾಹಿತಿ ದಾಖಲಾಗಿದೆ. ಶುಕ್ರವಾರ ಮತ್ತು ಭಾನುವಾರವೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಫೋನ್, ಉಂಗುರ, ಕೀ, ಪರ್ಸ್, ಟೊಪ್ಪಿ, ಬ್ಯಾಗು, ಲೈಸೆನ್ಸ್, ಐಡಿ ಕಾರ್ಡ್, ಡಾಂಗಲ್, ಚಾರ್ಜರ್, ಕನ್ನಡಕ - ಕಳೆದುಹೋದ ಪಟ್ಟಿಯಲ್ಲಿರುವ ಅತೀ ಸಾಮಾನ್ಯ ವಸ್ತುಗಳಿವು.

14 ಲಕ್ಷ ರೂಪಾಯಿ ಮೌಲ್ಯದ ಚೆಕ್, ಕೀಬೋರ್ಡ್, ಪಪ್ಪೀಸ್, ದುಬಾರಿ ವಾಚು, ದುಬಾರಿ ಚಪ್ಪಲಿ, ಮದ್ಯಬಾಟಲಿ, ತರಕಾರಿ, ಕ್ರಿಕಟ್ ಬ್ಯಾಟ್'ಗಳನ್ನೂ ಕ್ಯಾಬ್'ನಲ್ಲಿ ಬಿಟ್ಟು ಹೋದ ಜನರುಂಟು ಎನ್ನುತ್ತದೆ ಊಬರ್ ಸರ್ವೆ.