Asianet Suvarna News Asianet Suvarna News

ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ನಗರ: ಬೆಂಗಳೂರು ದೇಶದಲ್ಲೇ ಪ್ರಥಮ

ಜಾಗತಿಕ ಶೈಕ್ಷಣಿಕ ಸಲಹಾ ಸಂಸ್ಥೆ ಕ್ಯೂಎಸ್‌ ಕ್ವಾಕ್ಯುರೆಲಿ ಸೈಮಂಡ್ಸ್‌ ಸಂಸ್ಥೆ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಇಷ್ಟಪಡುವ ವಿಶ್ವದ ಅತ್ಯುತ್ತಮ 120 ನಗರಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಬೆಂಗಳೂರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ನಗರವಾಗಿ ನಂ.1 ಸ್ಥಾನ ಪಡೆದಿದೆ.

Bengaluru is India's most student friendly city
Author
Bengaluru, First Published Aug 1, 2019, 8:39 AM IST

ಲಂಡನ್‌ [ಆ.01]:  ಭಾರತದ ಐಟಿ ಸಿಟಿ, ಸ್ಟಾರ್ಟಪ್‌ ರಾಜಧಾನಿ ಎಂಬೆಲ್ಲಾ ಹಿರಿಮೆಗಳನ್ನು ಹೊಂದಿರುವ ಕರುನಾಡಿನ ರಾಜಧಾನಿ ಬೆಂಗಳೂರಿನ ಮುಕುಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಬಯಸುವ ಭಾರತದ ಅಚ್ಚುಮೆಚ್ಚಿನ ನಗರಗಳ ಪಟ್ಟಿಯಲ್ಲಿ ಬೆಂಗಳೂರು ನಂ.1 ಸ್ಥಾನ ಪಡೆದಿದೆ.

ಜಾಗತಿಕ ಶೈಕ್ಷಣಿಕ ಸಲಹಾ ಸಂಸ್ಥೆ ಕ್ಯೂಎಸ್‌ ಕ್ವಾಕ್ಯುರೆಲಿ ಸೈಮಂಡ್ಸ್‌ ಸಂಸ್ಥೆ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಇಷ್ಟಪಡುವ ವಿಶ್ವದ ಅತ್ಯುತ್ತಮ 120 ನಗರಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಅದರಲ್ಲಿ ಸತತ ಎರಡನೇ ವರ್ಷವೂ ಲಂಡನ್‌ ಪ್ರಥಮ ಸ್ಥಾನದಲ್ಲಿದ್ದರೆ, ಬೆಂಗಳೂರು 81ನೇ ಸ್ಥಾನ ಗಳಿಸಿದೆ. ಇನ್ಯಾವ ಭಾರತದ ನಗರವೂ ಬೆಂಗಳೂರಿಗಿಂತ ಮೇಲಿಲ್ಲ ಎಂಬುದು ಗಮನಾರ್ಹ.

ಭಾರತದಲ್ಲಿ ವಿದ್ಯಾರ್ಥಿಗಳ ನಂ.1 ಅಚ್ಚುಮೆಚ್ಚಿನ ನಗರ ಬೆಂಗಳೂರು ಆಗಿದ್ದರೆ, ಮುಂಬೈ 2ನೇ (ವಿಶ್ವಮಟ್ಟದಲ್ಲಿ 85) ಸ್ಥಾನದಲ್ಲಿದೆ. ದೆಹಲಿ (113) ಹಾಗೂ ಚೆನ್ನೈ (115) ಕ್ರಮವಾಗಿ 3 ಮತ್ತು ನಾಲ್ಕನೇ ಸ್ಥಾನದಲ್ಲಿವೆ.

ಜಾಗತಿಕ ಮಟ್ಟದಲ್ಲಿ ಲಂಡನ್‌ ನಂತರ 2ನೇ ಸ್ಥಾನದಲ್ಲಿ ಟೋಕಿಯೋ, 3ನೇ ಸ್ಥಾನದಲ್ಲಿ ಮೆಲ್ಬರ್ನ್‌ ಸ್ಥಾನ ಪಡೆದುಕೊಂಡಿವೆ. ತದನಂತರ ಸ್ಥಾನದಲ್ಲಿ ಮ್ಯೂನಿಕ್‌, ಬರ್ಲಿನ್‌, ಮಾಂಟ್ರಿಯಲ್‌, ಪ್ಯಾರಿಸ್‌, ಸಿಡ್ನಿ, ಸೋಲ್‌ ಸ್ಥಾನ ಪಡೆದುಕೊಂಡಿವೆ.

Follow Us:
Download App:
  • android
  • ios