ಬೆಂಗಳೂರಿನಲ್ಲಿ ಭಾರತದಲ್ಲಿಯೇ ಮೊದಲ ಬಿಟ್ ಕಾಯಿನ್ ಎಟಿಎಂ ಆರಂಭ ಮಾಡಲಾಗುತ್ತಿದೆ. ಆನದು ಬಿಟ್ ಕಾಯಿನ್ ಎಟಿಎಂ ಇಲ್ಲಿದೆ ಮಾಹಿತಿ. 

ಬೆಂಗಳೂರು : ಬೆಂಗಳೂರಿನಲ್ಲಿ ಭಾರತದಲ್ಲಿಯೇ ಮೊದಲ ಬಾರಿಗೆ ಬಿಟ್ ಕಾಯಿನ್ ಎಟಿಎಂ ಆರಂಭವಾಗುತ್ತಿದೆ.

ಆರ್ ಬಿಐನಿಂದ ಅನುಮತಿ ಇಲ್ಲದ ನಡುವೆಯೂ ಕೂಡ ಕ್ರಿಪ್ಟೊ ಕರೆನ್ಸಿ ಎಕ್ಸ್ ಚೇಂಜ್ ಗಾಗಿ ಬಿಟ್ ಕಾಯಿನ್ ಎಟಿಎಂ ತೆರೆಯಲಾಗುತ್ತಿದೆ. 

ಇಲ್ಲಿ ಬಿಟ್ ಕಾಯಿನ್ ಗ್ರಾಹಕರು ಹಣವನ್ನು ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಈಗಾಗಲೇ ಈ ಎಟಿಎಂ ಅಂತಿಮ ಹಂತದ ಪರಿಶೀಲನೆಯಲ್ಲಿದ್ದು ಮುಂದಿನ ಕೆಲ ವಾರಗಳಲ್ಲಿ ಎಟಿಎಂ ಅಳವಡಿಕೆ ಮಾಡಲಾಗುತ್ತದೆ. 

ಇಂತಹ ವರ್ಚುಅಲ್ ಕರೆನ್ಸಿಗಳನ್ನು ಬ್ಯಾನ್ ಮಾಡುವ ಬಗ್ಗೆ ಇತ್ತೀಚೆಗಷ್ಟೇ ಆರ್ ಬಿಐ ಸೂಚನೆಯೊಂದನ್ನು ಹೊರಡಿಸಿದ್ದು, ಇದರ ನಡುವೆಯೇ ಇಲ್ಲಿ ಬಿಟ್ ಕಾಯಿನ್ ಎಟಿಎಂ ಅಳವಡಿಕೆ ಮಾಡಲಾಗುತ್ತಿದೆ. 

ಸಾಮಾನ್ಯವಾಗಿ ಬಿಟ್ ಕಾಯಿನ್ ವ್ಯವಹಾರ ಆ್ಯಪ್ ಮೂಲಕ ಮಾಡಲಾಗುತ್ತದೆ. ಈ ಎಟಿಎಂ ಕೂಡ ಆ್ಯಪ್ ನಂತೆಯೇ ಕಾರ್ಯ ನಿರ್ವಹಿಸಲಿದ್ದು, ಇಲ್ಲಿ ಹಣ ತೆಗೆಯಲು ಕೂಡ ಅವಕಾಶ ಒದಗಿಸಲಾಗಿದೆ. 

Scroll to load tweet…