ಬೆಂಗಳೂರು ಮೂಲದ ಮಾರುಕಟ್ಟೆ ವಿಶ್ಲೇಷಣೆ ಸಂಸ್ಥೆ ರೇನ್‌ಮ್ಯಾನ್ ಕನ್ಸಲ್ಟಿಂಗ್ ಫೇಸ್‌ಬುಕ್‌ನ ಮಾರುಕಟ್ಟೆ ಜೊತೆಗಾರ ಎನಿಸಿಕೊಂಡಿದೆ.
ನವದೆಹಲಿ: ಬೆಂಗಳೂರು ಮೂಲದ ಮಾರುಕಟ್ಟೆ ವಿಶ್ಲೇಷಣೆ ಸಂಸ್ಥೆ ರೇನ್ಮ್ಯಾನ್ ಕನ್ಸಲ್ಟಿಂಗ್ ಫೇಸ್ಬುಕ್ನ ಮಾರುಕಟ್ಟೆ ಜೊತೆಗಾರ ಎನಿಸಿಕೊಂಡಿದೆ.
ಹೀಗಾಗಿ ರೇನ್ಮ್ಯಾನ್ ಕನ್ಸಲ್ಟಿಂಗ್ ಕಂಪನಿ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಆಡಿಯನ್ಸ್ ನೆಟ್’ವರ್ಕಿನಿಂದ ಏಷ್ಯಾದಲ್ಲಿರುವ ತನ್ನ ಗ್ರಾಹಕರಿಗಾಗಿ ನೇರವಾಗಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಫೇಸ್ಬುಕ್’ನೊಂದಿಗೆ ಮಾರುಕಟ್ಟೆ ಜೊತೆಗಾರನಾದ ಏಷ್ಯಾದ ಮೊದಲ ಕಂಪನಿಗಳ ಪೈಕಿ ರೇನ್ಮ್ಯಾನ್ ಕನ್ಸಲ್ಟಿಂಗ್ ಕೂಡ ಒಂದೆನಿಸಿದೆ.
ಇದರಿಂದ ಜಾಹೀರಾತುದಾರರ ಕುರಿತು ಹೆಚ್ಚು ನಿಖರ ಮತ್ತು ಕ್ರಿಯಾಶೀಲ ಒಳನೋಟಗಳು ಲಭ್ಯವಾಗಲಿವೆ. ಈ ದತ್ತಾಂಶಗಳು ಕಂಪನಿಯ ಭವಿಷ್ಯದ ವಿಶ್ಲೇಷಣೆಗೂ ಬಳಕೆಯಾಗಲಿದೆ ಎಂದು ಕಂಪನಿ ತಿಳಿಸಿದೆ.
