ಆಗ ಮತ್ತೊಂದು ನಾಣ್ಯವಿರಬಹುದು ಎಂದು ಹೇಳಿದಕ್ಕೆ ರಾಧಾ ಆಸನದಿಂದ ಮೇಲೆದ್ದು ಕೆಳಗೆ ಬಿದ್ದಿರುವ ನಾಣ್ಯವನ್ನು ಹುಡುಕಲು ಮುಂದಾಗಿದ್ದಾರೆ. ಈ ವೇಳೆ ರಾಧಾ ಅವರ ವ್ಯಾನಿಟಿ ಬ್ಯಾಗ್ ಅನ್ನು ತೆಗೆದುಕೊಂಡ ಆರೋಪಿಗಳು, ಅದರಲ್ಲಿದ್ದ ಚಿನ್ನದ ಸರ ಎಗರಿಸಿದ್ದಾರೆ

ಬೆಂಗಳೂರು(ಡಿ.02): ಬಿಎಂಟಿಸಿ ಬಸ್‌ನಲ್ಲಿ 5 ರೂ. ಮುಖಬೆಲೆಯ ನಾಣ್ಯವನ್ನು ಬೀಳಿಸಿ ಮಹಿಳಾ ಪ್ರಯಾಣಿಕರೊಬ್ಬರ ಗಮನ ಬೇರೆಡೆ ಸೆಳೆದು 100 ಗ್ರಾಂ ಚಿನ್ನದ ಸರ ಎಗರಿಸಿ ನಾಲ್ವರು ಖತರ್ನಾಕ್ ಕಳ್ಳಿಯರು ಪರಾರಿಯಾಗಿರುವ ಘಟನೆ ಮಡಿವಾಳ ಸಮೀಪ ನಡೆದಿದೆ. ಹಾಸನ ಮೂಲದ ರಾಧಾ ಎಂಬುವರೇ ವಂಚನೆಗೊಳಗಾಗಿದ್ದು, ಹೊಸೂರು ರಸ್ತೆ ಕೂಡ್ಲುವಿನಲ್ಲಿರುವ ಸಂಬಂಧಿಕರ ಮನೆಗೆ ಗುರುವಾರ ಅವರು ತೆರಳುವಾಗ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ತಮ್ಮೂರಿನಿಂದ ಬೆಳಗ್ಗೆ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ನಗರಕ್ಕೆ ಆಗಮಿಸಿದ ರಾಧಾ ಅವರು, ಅಲ್ಲಿಂದ ಕೂಡ್ಲುಗೆ ತೆರಳಲು ಬಿಎಂಟಿಸಿ ಬಸ್ ಹತ್ತಿದ್ದರು. ಆಗ ಮಾರ್ಗ ಮಧ್ಯೆ ನಿಮ್ಹಾನ್ಸ್ ಬಸ್ ನಿಲ್ದಾಣದಲ್ಲಿ ಐದು ವರ್ಷದ ಬಾಲಕ ಜತೆ ನಾಲ್ವರು ಮಹಿಳೆಯರು, ಅದೇ

ಬಸ್ ಹತ್ತಿದ್ದರು. ಕೆಲ ದೂರು ಸಾಗಿದ ನಂತರ ಆ ಮಹಿಳೆಯರು, ಬಸ್ಸಿನಲ್ಲಿ ಸಹ ಪ್ರಯಾಣಿಕರನ್ನು ತಳ್ಳಿಕೊಂಡು ರಾಧಾ ಅವರ ಸಮೀಪಕ್ಕೆ ಬಂದು ನಿಂತಿದ್ದರು. ತರುವಾಯ ಮಡಿವಾಳ ಚೆಕ್ ಪೋಸ್ಟ್ ಸಮೀಪ ಆರೋಪಿಗಳ ಪೈಕಿ ಒಬ್ಬಾಕೆ, 5 ರೂ. ನಾಣ್ಯವನ್ನು ಬೇಕಂತಲೇ ಕೆಳಗೆ ಬೀಳಿಸಿದ್ದಳು. ಆಗ ತಮ್ಮ ಕಾಲ ಬಳಿಗೆ ಬಿದ್ದ ನಾಣ್ಯವನ್ನು ಎತ್ತಿ ಆ ಮಹಿಳೆಗೆ ರಾಧಾ ಕೊಟ್ಟಿದ್ದಾರೆ. ಆಗ ಮತ್ತೊಂದು ನಾಣ್ಯವಿರಬಹುದು ಎಂದು ಹೇಳಿದಕ್ಕೆ ರಾಧಾ ಆಸನದಿಂದ ಮೇಲೆದ್ದು ಕೆಳಗೆ ಬಿದ್ದಿರುವ

ನಾಣ್ಯವನ್ನು ಹುಡುಕಲು ಮುಂದಾಗಿದ್ದಾರೆ. ಈ ವೇಳೆ ರಾಧಾ ಅವರ ವ್ಯಾನಿಟಿ ಬ್ಯಾಗ್ ಅನ್ನು ತೆಗೆದುಕೊಂಡ ಆರೋಪಿಗಳು, ಅದರಲ್ಲಿದ್ದ ಚಿನ್ನದ ಸರ ಎಗರಿಸಿದ್ದಾರೆ. ಕೆಲ ನಿಮಿಷದ ಬಳಿಕ ಸೀಟ್ ಕೆಳಗೆ ಮತ್ತೊಂದು ನಾಣ್ಯ ಬಿದ್ದಿಲ್ಲ ಎಂದು ಹೇಳಿ ಅವರು ಕುಳಿತಿದ್ದಾರೆ. ಅಷ್ಟರಲ್ಲಿ ಮಡಿವಾಳ ಚೆಕ್ ಪೋಸ್ಟ್ ಬಳಿ ಬಸ್ ನಿಲ್ಲಿಸುತ್ತಿದ್ದಂತೆ ಆ ಮಹಿಳೆಯರು ಇಳಿದಿದ್ದಾರೆ. ಕೆಲ ಹೊತ್ತಿನ ಬಳಿಕ ಮಹಿಳೆ ಯರ ನಾಟಕೀಯ ನಡವಳಿಕೆಗೆ ಅನುಮಾನಗೊಂಡ ರಾಧಾ, ಬ್ಯಾಗ್ ಪರಿಶೀಲಿಸಿ ದಾಗ ಕಳ್ಳತನ ಗೊತ್ತಾಗಿದೆ