ಕುಡಿದು ಕಾರು ಚಲಾಯಿಸಿ ಅಪಘಾತ

Bengaluru Accident
Highlights

ಕುಡಿದು ಒನ್​ವೇನಲ್ಲಿ ಕಾರು ಚಲಾಯಿಸಿದ್ದರಿಂದ  ಅಪಘಾತ ಸಂಭವಿಸಿರುವ ಘಟನೆ ತಡರಾತ್ರಿ ಬೆಂಗಳೂರಿನ ಹನುಮಂತನಗರದ ನಿರ್ಮಲಾ ಸ್ಟೋರ್ಸ್​​ ಬಳಿ ನಡೆದಿದೆ.

ಬೆಂಗಳೂರು : ಕುಡಿದು ಒನ್​ವೇನಲ್ಲಿ ಕಾರು ಚಲಾಯಿಸಿದ್ದರಿಂದ  ಅಪಘಾತ ಸಂಭವಿಸಿರುವ ಘಟನೆ ತಡರಾತ್ರಿ ಬೆಂಗಳೂರಿನ ಹನುಮಂತನಗರದ ನಿರ್ಮಲಾ ಸ್ಟೋರ್ಸ್​​ ಬಳಿ ನಡೆದಿದೆ.

ಡಿಕ್ಕಿಯಾದ ರಭಸಕ್ಕೆ ಒಂದು ಸ್ವಿಫ್ಟ್​ ಡಿಸೈರ್​ ಕಾರು ಮತ್ತೊಂದು ಗೂಡ್ಸ್​  ಗಾಡಿ ಜಖಂ ಆಗಿವೆ. ಚಾಲಕ ಅಭಿಷೇಕ್ ಎಂಬಾತ ತಡರಾತ್ರಿ 1 ಗಂಟೆ ಹೊತ್ತಿಗೆ ಕುಡಿದು ತನ್ನ ಇನ್ನೋವಾ ಕಾರಿನಲ್ಲಿ ಹನುಮಂತನಗರದಿಂದ ನಿರ್ಮಲ ಸ್ಟೋರ್ಸ್ ಕಡೆಗೆ ಒನ್​ವೇನಲ್ಲಿ ವೇಗವಾಗಿ ಬಂದಿದ್ದು, ಈ ವೇಳೆ ಎದುರಿನಿಂದ ಬರುತ್ತಿದ್ದ ಸ್ವಿಫ್ಟ್ ಡಿಸೈರ್​ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.

ನಂತರ ಮತ್ತೊಂದು ಗೂಡ್ಸ್ ಆಟೋಗೂ ಡಿಕ್ಕಿ ಹೊಡೆಸಿ ಬಳಿಕ ರಸ್ತೆ ಬದಿಯ ಕಾಂಪೌಂಡ್ ಒಂದಕ್ಕೆ ಗುದ್ದಿದ್ದಾನೆ. ಆದರೆ ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.

ಘಟನೆ ನಡೆದ ಬಳಿಕ ಸ್ಥಳೀಯರು ಇನ್ನೋವಾ ಚಾಲಕ ಅಭಿಷೇಕ್​ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಸ್ವಿಫ್ಟ್​ ಡಿಸೈರ್ ವಾಹನದಲ್ಲಿದ್ದ ಮೂವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಬಗ್ಗೆ ಬಸವನಗುಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

loader