ಬೆಂಗಳೂರು ಮೆಟ್ರೋದಲ್ಲಿ ಜೂ.22 ರಿಂದ 6 ಕೋಚ್ ಸೌಲಭ್ಯ

Bengaluru: 6 coach Metro set to start on Friday
Highlights

  • ಬಯ್ಯಪ್ಪನಹಳ್ಳಿ- ಮೈಸೂರು ರಸ್ತೆಯ ಪರ್ಪಲ್ ಮಾರ್ಗಕ್ಕೆ  6 ಕೋಚ್'ಗಳ ಸೌಲಭ್ಯ
  • ಜೂನ್ 2019ರ ವೇಳೆಗೆ ಎಲ್ಲ ಮಾರ್ಗಗಳಿಗೂ 6 ಕೋಚ್'ಗಳ ವಿಸ್ತರಣೆ

ಬೆಂಗಳೂರು[ಜೂ.18]: ನಮ್ಮ ಮೆಟ್ರೋದ ಫೇಸ್ 1 ಜೂ.24 ಕ್ಕೆ ಒಂದು ವರ್ಷ ಪೂರ್ಣಗೊಳಿಸಲಿದ್ದು ಈ ಶುಭ ಸಂದರ್ಭಕ್ಕಾಗಿ ಬಿಎಂಆರ್'ಸಿಎಲ್ ಜೂ.22ರಿಂದ ಪ್ರಯಾಣಿಕರಿಗಾಗಿ 6 ಕೋಚ್'ಗಳ ಸೌಲಭ್ಯ ಒದಗಿಸಲಿದೆ.

ಪೂರ್ವ - ಪಶ್ಚಿಮ ಕಾರಿಡಾರ್'ನ ಬಯ್ಯಪ್ಪನಹಳ್ಳಿ- ಮೈಸೂರು ರಸ್ತೆಯ ಪರ್ಪಲ್ ಮಾರ್ಗಕ್ಕೆ  6 ಕೋಚ್'ಗಳನ್ನು ಒದಗಿಸಲಾಗುತ್ತದೆ. ಮೊದಲ ಬೋಗಿಯನ್ನು ಮಹಿಳೆಯರಿಗಾಗಿ ಮೀಸಲಿಡಲಾಗುತ್ತದೆ. 

ಹಾಲಿ ಮೆಟ್ರೋ ರೈಲುಗಳು 3 ಕೋಚ್'ಗಳನ್ನು ಹೊಂದಿದ್ದು ಒಮ್ಮೆಗೆ 900 ಪ್ರಯಾಣಿಕರು ಸಂಚರಿಸಬಹುದು. ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಹೆಚ್ಚು ಕೋಚ್'ಗಳನ್ನು ಅಳವಡಿಸಲಾಗುತ್ತಿದೆ. ಜೂನ್ 2019ರ ವೇಳೆಗೆ ಎಲ್ಲ ಮಾರ್ಗಗಳಿಗೂ 6 ಕೋಚ್'ಗಳನ್ನು ವಿಸ್ತರಿಸಲು ಬಿಎಂಆರ್'ಸಿಎಲ್ ಉದ್ದೇಶ ಹೊಂದಿದೆ.

loader