ಕೋಲ್ಕತ್ತಾ[ಅ.05]: 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ, ಹನುಮಂತನ ವೇಷಧಾರಿಯಾಗಿ ಬಿಜೆಪಿ ಪರ ಪ್ರಚಾರ ನಡೆಸಿದ್ದ ನಿಭಾಸ್ ಸರ್ಕಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹೌದು 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಾಂಗ್ಲಾದೇಶದ ನಾದಿಯಾ ಜಿಲ್ಲೆಯಲ್ಲಿ ಹನುಮಂತ ವೇಷಧಾರಿಯಾಗಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದ ನಿಭಾಸ್ ಕೊನೆಯುಸಿರೆಳೆದಿದ್ದಾರೆ. ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದ ನಿಭಾಸ್ RSS ಕಾರ್ಯಕರ್ತ ಹಾಗೂ 'ಜಾತ್ರಾ' ಕಲಾವಿದನೂ ಹೌದು. ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದ ನಿಭಾಸ್ ಫೋಟೋಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಟ್ವಿಟರ್ ನಲ್ಲಿ ಶೇರ್ ಮಾಡಿದ ಬಳಿಕ ಅವರು ದೇಶದಾದ್ಯಂತ ಫೇಮಸ್ ಆಗಿದ್ದರು.

ಇನ್ನು ನಿಭಾಸ್ ಕೊನೆಯುಸಿರೆಳೆಯುವುದಕ್ಕೂ ಮೊದಲು ನಡೆದ ಘಟನೆಯನ್ನು ವಿವರಿಸಿರಿದ ಮಂಡಲ ಸಭಾಪತಿ ತಪಸ್ ಘೋಷ್ 'ಗುರುವಾರ ಮಧ್ಯಾಹ್ನ ನಿಭಾಸ್ ಬಾತ್ ರೂಂಗೆ ತೆರಳಿದ್ದರು. ಕೆಲ ನಿಮಿಷಗಳಲ್ಲೇ ಪುಟ್ಟದೊಂದು ಬಾಟಲ್ ಹಿಡಿದು ಹೊರ ಬಂದಿದ್ದ ಅವರು ತನ್ನ ತಮ್ಮನ ಬಳಿ ಜೀವನದ ಮೇಲೆ ಬಹಳ ಜಿಗುಪ್ಸೆ ಹುಟ್ಟಿದೆ. ಹೀಗಾಗಿ ತನು ವಿಷ ಸೇವಿಸಿದ್ದೇನೆ ಎಂದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಯಿತಾದರೂ, ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಅವರ ಕುಟುಂಬದಲ್ಲಿ ಅಸಮಾಧಾನ ತಲೆದೋರಿತ್ತು' ಎಂದು ತಿಳಿಸಿದ್ದಾರೆ.

ಬಗುಲಾದ ರಾಣಘಟ್ ನಿವಾಸಿಯಾಗಿದ್ದ ನಿಭಾಸ್ ಇತ್ತೀಚೆಗಷ್ಟೇ ರಾಜಸ್ಥಾನದ ಉದಯ್ ಪುರಕ್ಕೆ ಶಿಫ್ಟ್ ಆಗಿದ್ದರು. ಇನ್ನು NCR ಸಮಸ್ಯೆಯಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನುವ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿಕೊಂಡಿವೆ. 

ಅ.05ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;