10 ವರ್ಷದ ಬಳಿಕ ಕಾಣೆಯಾದ ನಾಯಿ ಮರಳಿ ಮನೆ ಸೇರಿತು..!

First Published 4, Feb 2018, 1:55 PM IST
Beloved Dog Missing For 10 Years Finds Her Way Back Home
Highlights

ನಿಮ್ಮ ಪ್ರೀತಿ ಪಾತ್ರವಾದ ಪ್ರಾಣಿಯು ನಿಮ್ಮಿಂದ ಒಂದು ದಿನ ದೂರ ಉಳಿದರೆ ನಿಮಗೆ ಹೇಗಾಗುತ್ತದೆ. ಆದರೆ ವರ್ಷಾನುಗಟ್ಟಲೆ ಕಳೆದುಹೋಗಿ ನೀವು ಸಾಕಿದ ನಾಯಿ ನಿಮ್ಮನ್ನು ಹುಡುಕಿಕೊಂಡು ಮರಳಿ ಬಂದರೆ ನಿಮ್ಮ ಮನಸ್ಥಿತಿ ಹೇಗಾಗಬೇಡ. ಅದನ್ನು ಊಹಿಸಲು ಕೂಡ ಅಸಾಧ್ಯ ಎನಿಸುತ್ತದೆ.

ವಾಷಿಂಗ್ಟನ್ : ನಿಮ್ಮ ಪ್ರೀತಿ ಪಾತ್ರವಾದ ಪ್ರಾಣಿಯು ನಿಮ್ಮಿಂದ ಒಂದು ದಿನ ದೂರ ಉಳಿದರೆ ನಿಮಗೆ ಹೇಗಾಗುತ್ತದೆ. ಆದರೆ ವರ್ಷಾನುಗಟ್ಟಲೆ ಕಳೆದುಹೋಗಿ ನೀವು ಸಾಕಿದ ನಾಯಿ ನಿಮ್ಮನ್ನು ಹುಡುಕಿಕೊಂಡು ಮರಳಿ ಬಂದರೆ ನಿಮ್ಮ ಮನಸ್ಥಿತಿ ಹೇಗಾಗಬೇಡ. ಅದನ್ನು ಊಹಿಸಲು ಕೂಡ ಅಸಾಧ್ಯ ಎನಿಸುತ್ತದೆ.

ಆದರೆ ಪೆನ್ಸಿಲ್ವೇನಿಯಾದಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದೆ.  ವಾಷಿಂಗ್ಟನ್ ನಿವಾಸಿ  ದೆಬ್ರಾ ಎನ್ನುವವರ ಕಪ್ಪು ಲ್ಯಾಬ್ ಮರಳಿ ಮತ್ತೆ ಮನೆ ಸೇರಿದೆ. ಇದೀಗ ತಮ್ಮ ಪ್ರೀತಿಯ ನಾಯಿ ಮರಳಿ ಮನೆಗೆ ಬಂದ ಖುಷಿಯನ್ನು ಅವರು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.

ಈ ಬಗ್ಗೆ ತಮಗೆ ಏನು ಹೇಳಬೇಕೆಂದು ತೋಚುತ್ತಿಲ್ಲ ಎಂದು ಹೇಳಿದ್ದಾರೆ. ನಾವು ಅದು ನಮ್ಮನ್ನು ಮತ್ತೆ ಸೇರುತ್ತದೆ ಎಂದುಕೊಂಡಿರಲಿಲ್ಲ. ಅದು ಜೀವಂತವಾಗಿದೆ ಎಂದೂ ಕೂಡ ನಾವು ಎಣಿಸಿರಲಿಲ್ಲ ಎಂದು ಹೇಳಿದ್ದಾರೆ.

ಕಳೆದ 10 ವರ್ಷದ ಹಿಂದೆ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಅದನ್ನು ನೋಡಿರುವುದೇ ಕೊನೆಯ ಬಾರಿ. ನಂತರ ಕಾಣೆಯಾಗಿದ್ದು, ಇದೀಗ ಮತ್ತೆ ನಮ್ಮನ್ನು ಸೇರಿದೆಎಂದು ಖುಷಿ ಹಂಚಿಕೊಂಡಿದ್ದಾರೆ.

loader