ಇದು ಕುರಿ ಕಾಯೋದಿಕೆ ತೋಳ ಕಾವಲಿಟ್ಟ ಕಥೆ. ಪೊಲೀಸ್ ಇನ್ಸ್ಪೆಕ್ಟರ್ ಮಾಡಿದ್ದ ಅಕ್ರಮ ಪತ್ತೆ ಹಚ್ಚಲು ನೇಮಿಸಿದ್ದ ಮತ್ತೊಬ್ಬ ಪೊಲೀಸ್ ಅಧಿಕಾರಿ ಕ್ಲೀನ್ ಚಿಟ್ ಕೊಟ್ಟಿದ್ದಾನೆ. ಇದರಿಂದಾಗಿ ಶ್ರೀ ಸಾಮಾನ್ಯ ಪೊಲೀಸರಿಂದ ನ್ಯಾಯ ಸಿಗುತ್ತಾ? ನ್ಯಾಯದೇವತೆ ನಮ್ಮ ಪಾಲಿಗೆ ಇದ್ದಾಳಾ ಅಂತ ಕೇಳುವಂತಾಗಿದೆ. ಏನಿದು ಸ್ಟೋರಿ ಅಂತೀರಾ? ಇಲ್ಲಿದೆ ವಿವರ.
ಬೆಳಗಾವಿ(ಮೇ.24): ಇದು ಕುರಿ ಕಾಯೋದಿಕೆ ತೋಳ ಕಾವಲಿಟ್ಟ ಕಥೆ. ಪೊಲೀಸ್ ಇನ್ಸ್ಪೆಕ್ಟರ್ ಮಾಡಿದ್ದ ಅಕ್ರಮ ಪತ್ತೆ ಹಚ್ಚಲು ನೇಮಿಸಿದ್ದ ಮತ್ತೊಬ್ಬ ಪೊಲೀಸ್ ಅಧಿಕಾರಿ ಕ್ಲೀನ್ ಚಿಟ್ ಕೊಟ್ಟಿದ್ದಾನೆ. ಇದರಿಂದಾಗಿ ಶ್ರೀ ಸಾಮಾನ್ಯ ಪೊಲೀಸರಿಂದ ನ್ಯಾಯ ಸಿಗುತ್ತಾ? ನ್ಯಾಯದೇವತೆ ನಮ್ಮ ಪಾಲಿಗೆ ಇದ್ದಾಳಾ ಅಂತ ಕೇಳುವಂತಾಗಿದೆ. ಏನಿದು ಸ್ಟೋರಿ ಅಂತೀರಾ? ಇಲ್ಲಿದೆ ವಿವರ.
ಮಾರ್ಚ್ 13ರಂದು ಬೆಳಗಾವಿ ಜಿಲ್ಲೆ ಕುಡಚಿಯ PSI ಶಿವಶಂಕರ್ ಮುಕತಿ ತೋರಿರೋ ರೌದ್ರಾವತಾರದ ಪರಿ ಇದು. ಹೋಳಿ ಹಬ್ಬದಂದು ಎಲ್ಲಾ ಬಾರ್'ಗಳನ್ನು ಬಂದ್ ಮಾಡಲಾಗಿತ್ತು. ಆದರೆ, ಬಂದ್ ಇದ್ದರೂ ಕುಡಿಯಲು ಬಂದ ಕುಡಚಿ PSI ಶಿವಶಂಕರ್ ಮುಕರಿ ಹಾಗೂ ಸಿಬ್ಬಂದಿ ಬಾರ್ ಬಾಗಿಲು ತೆರೆಯುವಂತೆ ಮ್ಯಾನೇಜರ್ಗೆ ಹೇಳಿದ್ದಾರೆ. ನಿರಾಕರಿಸಿದ ಮಾಲೀಕ ಹಾಗೂ ಸಿಬ್ಬಂದಿಯ ಮೇಲೆ ಮನಸೋಇಚ್ಛೆ ಥಳಿಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.. ಹಲ್ಲೆಯ ಬಳಿಕ ಬಾರ್ ಮಾಲೀಕ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿ, PSI ವಿರುದ್ಧ ಕುಡಚಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ. ಮಾಧ್ಯಮಗಳ ಸುದ್ದಿ ನೋಡಿ ಉತ್ತರ ವಲಯ ಐ.ಜಿ.ಪಿ ರಾಮಚಂದ್ರರಾವ್ ತನಿಖೆಗೆ ಆದೇಶಿಸಿದ್ದರು. ಆದರೆ, ತನಿಖೆ ಕೈಗೊಂಡ DySP ನಾಗರಾಜ್, PSI ಮುಕರಿ ಪರವಾಗಿ ವರದಿ ತಯಾರಿಸಿದ್ದಾರೆ.. ಬಾರ್ ಮಾಲೀಕನ ವಿರುದ್ಧವೇ ಕ್ರಮಕ್ಕೆ ಮುಂದಾಗಿರುವುದು ಅನುಮಾನ ಮೂಡಿಸಿದೆ.
ತನಿಖೆ ನಡೆಸಿದ DySP ನಾಗರಾಜ್ ನೀಡಿರುವ ವರದಿಯಲ್ಲಿರೋ ಪ್ರಮುಖ ಅಂಶಗಳು
ಕುಡಚಿ PSI ಶಿವಶಂಕರ್ ಮುಕರಿ ಹಲ್ಲೆ ಮಾಡಿದ ಸಿಸಿಟಿವಿ ದೃಶ್ಯ ಬಗ್ಗೆಯೇ ಅನುಮಾನವಿದೆ. ಬಾರ್ನಲ್ಲಿ ಸಿಕ್ಕಿರುವ ಸಿಸಿಟಿವಿ ದೃಶ್ಯಗಳಲ್ಲಿ ಸ್ಪಷ್ಟತೆ ಇಲ್ಲ. ಸಿಸಿಟಿವಿ ದೃಶ್ಯ ನಿಜವೆಂದು ನಂಬಲು ಸಾಧ್ಯವಿಲ್ಲ . ಬಾರ್ ಸಿಬ್ಬಂದಿಯಿಂದ ಘಟನೆಯ ಅತಿಯಾದ ರಂಜನೆ ಮಾಡಿದ್ದು PSI ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿಲ್ಲ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ದೆ, ಬಾರ್ ಮಾಲೀಕನ್ನ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆಂಬುದು ಸುಳ್ಳು. ನಿಷೇಧವಿದ್ದರೂ ಬಾರ್ನಲ್ಲಿ ಮದ್ಯ ಮಾರಾಟ ಮಾಡಲಾಗ್ತಿತ್ತು..ಪೋಲಿಸ್ ಅಧಿಕಾರಿಗಳಲ್ಲಿ ಭಯ ಹುಟ್ಟಿಸಲು ಈ ಆಪಾದನೆ ಮಾಡಲಾಗಿದೆ. ಜತೆಗೆ PSI ಮುಕರಿಗೆ ಪ್ರತಿ ತಿಂಗಳು 30ಸಾವಿರ ಮಾಮೂಲಿ ಆರೋಪ ಶುದ್ಧ ಸುಳ್ಳು ಅಂತಲೂ ವರದಿಯಲ್ಲಿ ಹೇಳಲಾಗಿದೆ.
ಹೀಗೆ PSI ಶಿವಶಂಕರ್ ಮುಕರಿ ಮಾಡಿದ ತಪ್ಪುಗಳನ್ನೆಲ್ಲಾ ಮರೆಮಾಚಿ, ಬಾರ್ ಮಾಲೀಕನ ವಿರುದ್ಧವೇ ಕೇಸ್ ಬುಕ್ ಮಾಡಲು ಮುಂದಾಗಿರುವ ತನಿಖಾಧಿಕಾರಿಗಳ ನಡೆ ಅನುಮಾನ ಎಡೆ ಮಾಡಿಕೊಟ್ಟಿದೆ. ಇಷ್ಟೇ ಅಲ್ದೇ ಇದೇ PSI ಶಿವಶಂಕರ್ ಮುಕರಿ ವಿರುದ್ಧ ಪ್ರೀತಿಸಿ ಮದುವೆಯಾಗಿದ್ದ ಮಹಿಳೆಯೊಬ್ರು ಇತ್ತೀಚೆಗೆ ದೂರು ನೀಡಿದ್ದಾರೆ.. ಸ್ಟೇಷನ್ಗೆ ಕರೆಯಿಸಿ ಲೈಂಗಿಕ ಕೀರುಕುಳ ನೀಡಿದ್ದಾನೆ ಅಂತ ಬೆಳಗಾವಿ ಎಸ್.ಪಿ ಕಚೇರಿಗೆ ತೆರಳಿ ಪ್ರಕರಣ ದಾಖಲು ಮಾಡಿದ್ದಳು.. ವಿಚಾರಣೆ ನಡೆಸ್ತಿರೋ ಪೊಲೀಸ್ ತನಿಖಾಧಿಕಾರಿ ಈ ಕೇಸಲ್ಲೂ ಕುಡಚಿ PSIಗೆ ಕ್ಲೀನ್ಚಿಟ್ ಕೊಟ್ರೂ ಅಚ್ಚರಿ ಏನಿಲ್ಲ ಅಂತ ಜನ ಮಾತಾಡಿಕೊಳ್ಳುತ್ತಿದ್ದಾರೆ.
