ಬೆಳಗಾವಿ(ಡಿ.11)  ರಾಜ್ಯದಲ್ಲಿ ಮದ್ಯಪಾನ ನಿಷೇಧ ಜಾರಿಗೆ ತರಲಾಗುತ್ತಿದೆಯೇ? ಎಂದು ಬಿಜೆಪಿ ಶಾಸಕ ಅಪ್ಪಚ್ವುರಂಜನ್ ಪ್ರಶ್ನೆ ಮಾಡಿದ್ದಾರೆ. ಆದರೆ ಈ ಪ್ರಶ್ನೆಗೆ ಉತ್ತರ ನೀಡಲು ಸಾಧ್ಯವಿಲ್ಲ. ಯಾಕೆಂದರೆ ಮೊದಲೆ ನೋಟಿಸ್ ನೀಡಬೇಕಾಗಿತ್ತು ಎಂದು ಸ್ಪೀಕರ್ ತಿಳಿಸಿದರು.

ಈ ಪ್ರಶ್ನೆಗೆ ಸಂಜೆ ಪ್ರತ್ಯೇಕವಾಗಿ ಬಂದರೆ ಉತ್ತರ ಒದಗಿಸಲಾಗುವುದು ಎಂದು ಕಾಲೆಳೆದ ಸ್ಪೀಕರ್ ರಮೇಶ್‌ ಕುಮಾರ್ ಚಟಾಕಿ ಹಾರಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ  ಸಿಎಂ ಕುಮಾರಸ್ವಾಮಿ ಲಿಕ್ಕರ್ ಬ್ಯಾನ್ ಮಾಡಿದ್ರೆ ಅಪ್ಪಚ್ಚು ರಂಜನ್ ಗೆ ಕೊಡಗಿನಲ್ಲಿ ಹೆಚ್ಚು ತೊಂದರೆಯಾಗುತ್ತದೆ ಎಂದು ಹೇಳಿದಾಗ ನಗೆ ಬುಗ್ಗೆ ಉಕ್ಕಿ ಬಂತು.

‘ಗೆಸ್ಟ್ ಹೌಸ್ ಬಿಟ್ಟು ಫೈವ್ ಸ್ಟಾರ್ ಹೋಟೆಲ್! ಇವ್ರೇನಾ ಜನಸಾಮಾನ್ಯರ ಸಿಎಂ?’

ಬೆಳಗಾವಿಯಲ್ಲಿ ಹತ್ತು ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ರಾಜ್ಯದ ವಿವಿಧ ಸಮಸ್ಯೆಗಳ ಚರ್ಚೆಗೆ ವೇದಿಕೆ ನಿರ್ಮಾಣವಾಗಿದೆ.  ಎರೆಡನೇ ದಿನ ಕಲಾಪ ಬೆಳಗಾವಿಯಲ್ಲಿ ಮುಂದುವರಿದಿದೆ.