ದಶಕಗಳ ಬಳಿಕ ಕನ್ನಡಿಗರ ಕೈಗೆ ಬೆಳಗಾವಿ ಪಾಲಿಕೆ

Belagavi Palike Mayor post may get Kannadigas
Highlights

ದಶಕಗಳ ಬಳಿಕ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ  ಕನ್ನಡಿಗರ ಮೇಲುಗೈ ಆಗಲಿದೆ. ರಾಜ್ಯ ಸರ್ಕಾರ ಉರುಳಿಸಿದ ಮೀಸಲಾತಿ ಅಸ್ತ್ರ ನಾಡದ್ರೋಹಿಗಳ ನಿದ್ದೆಗೆಡಿಸಿದೆ. ಈ ಭಾರಿ ನಾಡದ್ರೋಹಿಗಳು ಏನೇ ತಿಪ್ಪರಲಾಗಾ ಹಾಕಿದ್ರೂ ಬೆಳಗಾವಿ ಪಾಲಿಕೆ  ಮೇಯರ್ ಮಾತ್ರ ಕನ್ನಡಿಗರೇ ಆಗಲಿದ್ದಾರೆ.

ಬೆಂಗಳೂರು (ಫೆ.12): ದಶಕಗಳ ಬಳಿಕ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ  ಕನ್ನಡಿಗರ ಮೇಲುಗೈ ಆಗಲಿದೆ. ರಾಜ್ಯ ಸರ್ಕಾರ ಉರುಳಿಸಿದ ಮೀಸಲಾತಿ ಅಸ್ತ್ರ ನಾಡದ್ರೋಹಿಗಳ ನಿದ್ದೆಗೆಡಿಸಿದೆ. ಈ ಭಾರಿ ನಾಡದ್ರೋಹಿಗಳು ಏನೇ ತಿಪ್ಪರಲಾಗಾ ಹಾಕಿದ್ರೂ ಬೆಳಗಾವಿ ಪಾಲಿಕೆ  ಮೇಯರ್ ಮಾತ್ರ ಕನ್ನಡಿಗರೇ ಆಗಲಿದ್ದಾರೆ.

ನಾಡ ದ್ರೋಹಿಗಳಿಗೆ ಬಿಸಿ ತುಪ್ಪವಾಯ್ತು ಮೀಸಲಾತಿ ದಾಳ
ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಅವಧಿ ತಿಂಗಳ ಕೊನೆಗೆ ಮುಗಿಯಲಿದ್ದು, ಇದೇ ತಿಂಗಳ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ  ಚುನಾವಣೆಗೆ  ನಡೆಯಲಿದೆ. ಸರ್ಕಾರ ಮೇಯರ್ ಹುದ್ದೆಯನ್ನ ಎಸ್.ಟಿ ವರ್ಗಕ್ಕೆ  ಮತ್ತು ಉಪಮೇಯರ್ ಹುದ್ದೆಯನ್ನ ಹಿಂದುಳಿದ ಮಹಿಳೆಗೆ ಎಂದು ಮಿಸಲಾತಿ ಪ್ರಕಟಿಸಿದೆ. ಈ ಬಾರಿ ಎಸ್.ಟಿ ವರ್ಗಕ್ಕೆ ಸೇರಿದ ನಗರ ಸೇವಕರು ಎಂಇಎಸ್ ಗುಂಪಿನಲ್ಲಿ ಇಲ್ಲವೇ ಇಲ್ಲ. ಹೀಗಾಗಿ  ಯಾವುದೇ ಕಸರತ್ತು ಇಲ್ಲದೇ ತಾನಾಗಿಯೇ ಕನ್ನಡಿಗರ ಪಾಲಿಗೆ ಮೇಯರ್ ಪಟ್ಟ ಒಲಿದು ಬರಲಿದೆ.

ಕಳೆದ ನಾಲ್ಕುಅವಧಿಗೂ ನಾಡದ್ರೋಹಿಗಳೇ ಮೇಯರ್, ಉಪಮೇಯರ್ ಆಗಿದ್ದರು. ಈಗ  ಕನ್ನಡಿಗರ ಗುಂಪಿನಲ್ಲಿ ಇರುವ ಬಸಪ್ಪ ಚಿಕ್ಕಲದಿನ್ನಿ ಹಾಗೂ ಸಂಜೋತಾ ಗಂಡಗುದರಿ ಅವರಿಗೆ ಮೇಯರ್ ಆಗುವ ಅವಕಾಶವಿದೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸರ್ಕಾರದ ಮೇಲೆ ಒತ್ತಡ ಹಾಕಿ ಎಸ್ಟಿ ಮೀಸಲಾತಿಬರುವಂತೆ ಪ್ರಭಾವ ಬೀರಿದ್ದು, ಇದು ಎಂಇಎಸ್ ಸದಸ್ಯರಿಗೆ ಸಹಜವಾಗಿಯೇ ಶಾಕ್ ನೀಡಿದೆ.  ಇನ್ನು ಜನ ಪ್ರತಿನಿಧಿಗಳು ತೊಡೆ ತಟ್ಟಿ ನಿಂತರೆ ಉಪಮೇಯರ್ ಸ್ಥಾನ ಕೂಡ ಕನ್ನಡಿಗರ ಪಾಲಾಗಲಿದೆ.
 

loader