ಬೆಳಗಾವಿ[ಮಾ. 03]  ದೇಶ ವಿರೋಧಿ ಪೋಸ್ಟ್ ಮಾಡುವವರನ್ನು ಹಾಗೂ ಘೋಷಣೆ ಕೂಗುವ ದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಿ  ಎಂದು ಸಂಸದ ಸುರೇಶ ಅಂಗಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶ ವಿರೋಧಿ ಚಟುವಟಿಕೆ ಮಾಡುವವರ ಮೇಲೆ ಗುಂಡಿಕ್ಕಬೇಕು. ನಂತರ ಮುಂದೆ ಬಂದಿದ್ದನ್ನು ನೋಡೋಣ. ರಾಮದುರ್ಗದಲ್ಲಿ ಮಹಮ್ಮದಶೆಫಿ ಬೆಣ್ಣಿ ಎಂಬುವರು ಫೇಸ್ ಬುಕ್‌ನಲ್ಲಿ ದೇಶ ವಿರೋಧಿ ಪೋಸ್ಟ್ ಮಾಡಿದ್ದರೂ ಕ್ರಮಕೈಗೊಳ್ಳದ ಪೊಲೀಸರ ವಿರುದ್ಧ ಅಂಗಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಿಂತಿಲ್ಲ ಪಾಕಿಗಳ ಕೀಟಲೆ, ಪುಲ್ವಾಮಾ ಆವಂತಿಪುರ ಬಳಿ ಬಾಂಬ್ ಸ್ಫೋಟ

 ದೇಶ ದ್ರೋಹಿಗಳ ವಿರುದ್ಧ ಕ್ರಮಕೈಗೊಳ್ಳದಿದ್ದಲ್ಲಿ ವರ್ಗಾವಣೆ ಮಾಡಿಕೊಳ್ಳಿ, ಇಲ್ಲವೇ ಪಾಕಿಸ್ತಾನಕ್ಕಾದರೂ ಹೋಗಿ ಎಂದು ಪೊಲೀಸರ ಕ್ರಮ ಟೀಕಿಸಿದರು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಎಸ್ಪಿ ಸುಧೀರಕುಮಾರ ರೆಡ್ಡಿಗೆ ವಿರುದ್ಧ ಆಕ್ರೋಶ ಹೊರಹಾಕಿದರು.

 ದೇಶದ್ರೋಹಿಗಳನ್ನು ರಕ್ಷಣೆ ಮಾಡುವುದಿಲ್ಲ. ಅಂತವರಿಗೆ ಶಿಕ್ಷೆ ಖಂಡಿತವಾಗಿ ಆಗುತ್ತದೆ.  ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಸಾಕ್ಷಿಗಳು ಕಲೆ ಹಾಕಲಾಗುತ್ತಿದ್ದು, ಎರಡು ದಿನದಲ್ಲಿ ಆರೋಪಿಯನ್ನು ಬಂಧಿಸಲಾಗುದು ಎಂದು ಎಸ್ಪಿ ತಿಳಿಸಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು

 ಯಾವುದೇ ವ್ಯಕ್ತಿಗಳನ್ನು ಬಂಧಿಸುವ ಸಂದರ್ಭದಲ್ಲಿ ಸಾಕ್ಷ್ಯಗಳು ಮುಖ್ಯ. ಆದ್ದರಿಂದ ಸಾಕ್ಷ್ಯಗಳ ಸಿಕ್ಕ ನಂತರವೇ ಬಂಧಿಸಲಾಗುವುದು ಎಂದು ಎಸ್ಪಿ ಹೇಳಿದಾಗ ಜವಾಬ್ದಾರಿಯುತ ಸ್ಥಾನದಲ್ಲಿರಿ, ಮೊದಲು ಆರೋಪಿಯನ್ನು ಬಂಧಿಸಿ ಎಂದು ಅಂಗಡಿ ಒತ್ತಾಯ ಮಾಡಿದರು.