ಕನ್ನಡ ರಾಜ್ಯೋತ್ಸವಕ್ಕೆ ಇನ್ನು ಎರಡು ದಿನ ಮಾತ್ರ ಬಾಕಿ ಇರುವಾಗಲೇ ಮಹಾರಾಷ್ಟ್ರದ ಗೃಹ ಸಚಿವ ದೀಪಕ ಕೇಸರಕರ ಗಡಿ ಕ್ಯಾತೆ ತೆಗೆದಿದ್ದಾರೆ. ಬೆಳಗಾವಿ ಮಹಾರಾಷ್ಟ್ರದ ಅವಿಭಾಜ್ಯ ಅಂಗವಾಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಕನ್ನಡಪರ ಸಂಘಟನೆಗಳಲ್ಲಿ ಆಕ್ರೋಶ ವ್ಯಕ್ತಪಡಿಸಿವೆ.

ಬೆಳಗಾವಿ: ಕನ್ನಡ ರಾಜ್ಯೋತ್ಸವಕ್ಕೆ ಇನ್ನು ಎರಡು ದಿನ ಮಾತ್ರ ಬಾಕಿ ಇರುವಾಗಲೇ ಮಹಾರಾಷ್ಟ್ರದ ಗೃಹ ಸಚಿವ ದೀಪಕ ಕೇಸರಕರ ಗಡಿ ಕ್ಯಾತೆ ತೆಗೆದಿದ್ದಾರೆ.

ಬೆಳಗಾವಿ ಮಹಾರಾಷ್ಟ್ರದ ಅವಿಭಾಜ್ಯ ಅಂಗವಾಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಕನ್ನಡಪರ ಸಂಘಟನೆಗಳಲ್ಲಿ ಆಕ್ರೋಶ ವ್ಯಕ್ತಪಡಿಸಿವೆ.

ನಗರದ ಹಿಂದವಾಡಿಯ ಮಹಾವೀರ ಭವನದಲ್ಲಿ ಹಿಂದವಾಡಿ ಮಹಿಳಾ ಮಂಡಳಿ ಯ 50ನೇ ವರ್ಷಾಚರಣೆ ಸಮಾರಂಭ ಭಾನುವಾರ ಆಯೋಜಿಸಲಾಗಿತ್ತು. ಇದರಲ್ಲಿ ಮಹಾರಾಷ್ಟ್ರದ ಗೃಹ ಸಚಿವ ದೀಪಕ ಕೇಸರಕರ್ ಭಾಗವಹಿಸಿದ್ದರು.

ತಮ್ಮ ಭಾಷಣದಲ್ಲಿ ಮಾತನಾಡುತ್ತಾ ಅವರು, ಬೆಳಗಾವಿ ಇನ್ನು ಮಹಾರಾಷ್ಟ್ರ ರಾಜ್ಯಕ್ಕೆ ಸೇರ್ಪಡೆಯಾಗದಿದ್ದರೂ ಅದು ಮಹಾರಾಷ್ಟ್ರದ ಅವಿಭಾಜ್ಯ ಅಂಗವಾಗಿದೆ ಎಂದರಲ್ಲದೇ, ಜೈ ಮಹಾರಾಷ್ಟ್ರ ಎಂಬ ಘೋಷಣೆ ಕೂಗಿದರು.

ಇದೇ ಕಾರ್ಯಕ್ರಮದಲ್ಲಿದ್ದ ಗೋವಾದ ಮಾಜಿ ಮುಖ್ಯಮಂತ್ರಿ ಪ್ರತಾಪ ಸಿಂಹರಾಣೆ ತಮ್ಮ ಭಾಷಣದ ಕೊನೆಯಲ್ಲಿ ಜೈ ಗೋಮಾಂತಕ್, ಜೈ ಕರ್ನಾಟಕ ಎಂದು ಹೇಳಿದ್ದು ವಿಶೇಷ.

ಕಾರ್ಯಕ್ರಮದಲ್ಲಿ ಮೇಯರ್ ಸಂಜೋತಾ ಬಾಂದೇಕರ, ಗೋವಾ ಬಾಲಭವನದ ಮಾಜಿ ಅಧ್ಯಕ್ಷೆ ವಿಜಯಾದೇವಿ ರಾಣೆ, ಸಾವಂತವಾಡಿ ಮಾಜಿ ನಗರಾಧ್ಯಕ್ಷೆ ಪಲ್ಲವಿ ಕೇಸರಕರ, ಸುರೇಖ ರಾಜೆ ಸಾವಂತ, ಆಶಾ ಮನೋಹರ, ಧನಶ್ರೀ ಸಾವಂತ, ಅಪರ್ಣಾ ಖೋತ, ಕಮಲ ಯಾದವ, ಸರಿತಾ ಕಾಲಕುಂದ್ರಿಕರ, ಸುಮತಿ ಕುದಳೆ, ಅಶ್ವಿನಿ ಜಾಂಗಳೆ, ಪಾರ್ವತಿ ಭಾತಕಾಂಡೆ ಮೊದಲಾದವರು ಉಪಸ್ಥಿತರಿದ್ದರು.

ಮಹಿಳಾ ಮಂಡಳಿಯ 50ನೇ ವರ್ಷಾಚರಣೆಯ ಸ್ಮರಣ ಸಂಚಿಕೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.