ಮುಂಬೈ[ಜು.14]: ಕೆಲವೊಮ್ಮೆ ನಮ್ಮ ಕೋಪ ನಮಗೇ ಶತ್ರುವಾಗುತ್ತದೆ. ಸಣ್ಣ ವಿಚಾರಕ್ಕೆ ತಾಳ್ಮೆ ಕಳೆದುಕೊಂಡರೆ ದೊಡ್ಡ ಪ್ರಮಾದವನ್ನೇ ಎದುರಿಸಬೇಕಾಗುತ್ತದೆ.

ಹೌದು.. ಮುಂಬೈನಲ್ಲಿ ಓರ್ವ ವ್ಯಕ್ತಿ ಕೋಪಗೊಂಡು ಕಾರು ಡ್ರೈವರ್‌ ಮೇಲೆ ರೇಗಾಡಿದ್ದಕ್ಕೆ ಸಿಇಓ ಹುದ್ದೆಯನ್ನೇ ಕಳೆದುಕೊಂಡಿದ್ದಾನೆ. ಹಂಟ್‌ ಪಾರ್ಟನರ್‌ ಕಂಪನಿ ಸಿಇಓ ಹುದ್ದೆಗೆ ಸಂದರ್ಶನ ನಡೆಸುತ್ತಿತ್ತು. ಅಭ್ಯರ್ಥಿಯೋರ್ವ ಅಂತಿಮ ಹಂತದ ಸಂದರ್ಶನಕ್ಕೆ ತೆರಳುವ ವೇಳೆ ಜೋರು ಮಳೆ ಸುರಿಯುತ್ತಿದ್ದ ಕಾರಣ ಸಂಚಾರ ದಟ್ಟಣೆ ಉಂಟಾಗಿದೆ. ಕಾರು ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದರಿಂದ ಆ ಅಭ್ಯರ್ಥಿ, ಕಂಪನಿಯ ಕಾರು ಡ್ರೈವರ್‌ ಜತೆ ವಾಗ್ವಾದಕ್ಕಿಳಿದಿದ್ದಾನೆ.

ಕಾರು ಡ್ರೈವರ್‌ ಈ ಘಟನೆಯನ್ನು ಕಂಪನಿಯ ಆಡಳಿತ ಮಂಡಳಿ ಗಮನಕ್ಕೆ ವರದಿ ಮಾಡಿದ್ದಾನೆ. ಆಡಳಿತ ಮಂಡಳಿಯು ಅಭ್ಯರ್ಥಿಯ ವರ್ತನೆಯನ್ನು ಖಂಡಿಸಿ, ಒತ್ತಡ ಮತ್ತು ಸಮಯವನ್ನು ನಿಭಾಯಿಸಲಾಗದ ಈ ವ್ಯಕ್ತಿ ಈ ಹುದ್ದೆಯನ್ನು ಹೇಗೆ ನಿಭಾಯಿಸಬಲ್ಲನು ಎಂದು ಸಿಇಓ ಹುದ್ದೆ ಆಯ್ಕೆಯಿಂದ ಅವರನ್ನು ಕೈಬಿಟ್ಟಿದೆ.