ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ  ಎಲ್ಲಾ ಕಡೆ ಭದ್ರತೆ ಮಾಡಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ  ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಬೆಂಗಳೂರು (ಡಿ. 30): ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ಎಲ್ಲಾ ಕಡೆ ಭದ್ರತೆ ಮಾಡಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ನಗರ ಪೋಲಿಸ್ ಆಯುಕ್ತ ಮೇಘರಿಕ್ ಹೇಳಿದ್ದಾರೆ.

ಎಂ.ಜಿ ರಸ್ತೆ, ಬ್ರಿಗೇಡ್, ರೆಸಿಡೆನ್ಸಿ ರಸ್ತೆ, ಸೆಂಟ್ ಮಾರ್ಕ್ಸ್, ಚರ್ಚ್ ಸ್ಟ್ರೀಟ್​ನಲ್ಲಿ ವಾಹನ ಪಾರ್ಕ್ ಮಾಡುವಂತಿಲ್ಲ . ಡಿ.31ರ ಬೆಳಗ್ಗೆ 8 ರಿಂದಲೇ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಅನಿಲ್ ಕುಂಬ್ಳೆ ಜಂಕ್ಷನ್​ನಿಂದ ಮೇಯೋಹಾಲ್​ಗೆ ಸಂಚಾರ ಕಲ್ಪಿಸಲಾಗಿದೆ.

ಮ್ಯೂಸಿಯಂ ರಸ್ತೆಯಿಂದ ಚರ್ಚ್ ಸ್ಟ್ರೀಟ್ ತಲುಪಬಹುದು. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸುತ್ತಾಮುತ್ತ ಸಿಸಿಟಿವಿ ಹದ್ದಿನ ಕಣ್ಣಿಡಲಾಗಿದೆ. ಸಂಚಾರದಲ್ಲೂ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳಲಾಗಿದೆ. ಗರುಡಾ ಫೋರ್ಸ್ ಸಹ ಇರಲಿದೆ. ಫ್ಲೈ ಓವರ್‌ ಮೇಲೆ ಸಂಚಾರವಿರುವುದಿಲ್ಲ. ಭದ್ರತೆಗಾಗಿ ವಿಶೇಷ ಪಡೆಗಳನ್ನು ನಿಯೋಜಿಸಲಾಗಿದೆ. ರಾತ್ರಿ ಗಂಟೆ ತನಕ ಡೆಡ್ ಲೈನ್ ನೀಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಮೇಘರಿಕ್ ಹೇಳಿದ್ದಾರೆ.