ಬೆಂಗಳೂರು : ವ್ಯಾಪಾರಿಗಳಿಂದ ಕದ್ದು ಮುಚ್ಚಿ ಪಿಒಪಿ ಗಣೇಶ ವಿಗ್ರಹಗಳನ್ನು ಖರೀದಿಸಿ ಕೂರಿಸಲು ಮುಂದಾದರೆ ತೊಂದರೆ ಎದುರಿಸುವುದು ನಿಶ್ಚಿತ. ಏಕೆಂದರೆ ಮೂರ್ತಿ ಕೂರಿಸಲು ನೀವು ಬಿಬಿಎಂಪಿ ಅನುಮತಿ ಪಡೆಯಲು ಸಾಧ್ಯವಾಗುವುದಿಲ್ಲ. 

ಈ ಪಿಒಪಿ ಗಣಪತಿ ವಿಗ್ರಹಗಳನ್ನು ಹುಲ್ಲು, ಬಟ್ಟೆ, ಕಾಗದ, ಮರ, ಥರ್ಮಾಕೋಲ್, ಪ್ಲಾಸ್ಟರ್ ಆಫ್ ಪ್ಯಾರಿಸ್, ಸೆಣಬು, ಅಂಟು ವಸ್ತುಗಳು ಹಾಗೂ ಸಂಯೋಜಿತ ಬಣ್ಣಗಳಿಂದ ತಯಾರಿಸಲಾಗಿರುತ್ತದೆ. ಥರ್ಮಾಕೋಲ್ ನೀರಿನಲ್ಲಿ ಕರಗುವುದಿಲ್ಲ. 

ಸಂಯೋಜಿತ ಬಣ್ಣಗಳಲ್ಲಿ ಅಪಾಯಕಾರಿ ಭಾರ ಲೋಹಗಳಾದ ಕ್ರೋಮಿಯಂ, ಸೀಸ, ನಿಕ್ಕಲ್, ಕ್ಯಾಡ್ಮಿಯಂ, ಸತು ಮುಂತಾದವುಗಳಿರುತ್ತವೆ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನಲ್ಲಿ ಕ್ಯಾನ್ಸರ್ ಕಾರಕವಾದ ಅಸ್‌ಬೆಸ್ಟಾಸ್ ಅಂಶವಿರುತ್ತದೆ. ಗಣಪತಿ ವಿಗ್ರಹಕ್ಕೆ ಹಚ್ಚುವ ತೈಲ ವರ್ಣದಲ್ಲಿ ವಿಷ ರಾಸಾಯನಿಕ.