ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ್ ನೇತೃತ್ವದಲ್ಲಿ ಜೆ.ಸಿ ಸರ್ಫರಾಜ್ ಖಾನ್, ಹೆಲ್ತ್ ಇನ್ಸ್ ಪೆಕ್ಟರ್ ಸಿದ್ದಪ್ಪಾಜಿ ದಾಳಿ ನಡೆಸಿದ್ದಾರೆ.

ಬೆಂಗಳೂರು(ಡಿ.24): ನಗರದ ಐಶಾರಾಮಿ ರಸ್ತೆಯಾದ ಎಂ.ಜಿ. ರಸ್ತೆಯ ಅಝೂರ್ ಹುಕ್ಕಾ ಬಾರ್ ಕೆಫೆ ಮೇಲೆ ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿಯಿಂದ ದಾಳಿ ನಡೆಸಿ ಕೊಳೆತು ನಾರುತ್ತಿದ್ದ ಚಿಕನ್, ಅವಧಿ ‌ಮೀರಿದ ಆಹಾರ ಪದಾರ್ಥಗಳ ವಶ ಪಡಿಸಿಕೊಂಡಿದ್ದಾರೆ.

ಟೆರೆಸ್ ಮೇಲೆ ಹುಕ್ಕಾ ಬಾರ್ ನಡೆಸುತ್ತಿದ್ದ ಆರೋಪ ಹಿನ್ನೆಲೆಯಲ್ಲಿ ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ್ ನೇತೃತ್ವದಲ್ಲಿ ಜೆ.ಸಿ ಸರ್ಫರಾಜ್ ಖಾನ್, ಹೆಲ್ತ್ ಇನ್ಸ್ ಪೆಕ್ಟರ್ ಸಿದ್ದಪ್ಪಾಜಿ ದಾಳಿ ನಡೆಸಿದ್ದಾರೆ. ಲೈಸೆನ್ಸ್ ಪಡೆಯದೆ ಅನಧಿಕೃತವಾಗಿ ಕೆಫೆ ನಡೆಸಲಾಗುತ್ತಿತ್ತು. ಪದಾರ್ಥಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು 2 ಲಕ್ಷ ರೂ. ದಂಡ ವಿಧಿಸಿ ಹುಕ್ಕಾ ಬಾರ್'ಗೆ ಬೀಗ ಹಾಕಿದ್ದಾರೆ.