ನೂತನ ಬಿಬಿಎಂಪಿ ಮೇಯರ್ ಯಾರಾಗ್ತಾರೆ ಅನ್ನೋ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆ ಆಗ್ತಾರೆ ಅನ್ನೋವಷ್ಟರಲ್ಲಿ ಬಿಜೆಪಿ ತಮ್ಮ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಲು ಮುಂದಾಗಿದ್ದು, ಇಂದಿನ ಚುನಾವಣ ಕಣವನ್ನು ಮತ್ತಷ್ಟು ರಂಗೇರಿಸಿದೆ.

ಬೆಂಗಳೂರು(ಸೆ.28): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೂತನ ಮೇಯರ್ ಹಾಗೂ ಉಪಮೇಯರ್ ಹುದ್ದೆಗೆ ಇಂದು ಚುನಾವಣೆ ಈ ಬಾರಿಯೂ ಜೆಡಿಎಸ್ ಜೊತೆ ಹೆಜ್ಜೆ ಹಾಕಲು ಕಾಂಗ್ರೆಸ್ ಸಿದ್ಧವಾಗಿದೆ. ಕಾಂಗ್ರೆಸ್ ಗೆ ಮೇಯರ್ ಸ್ಥಾನ ಹಾಗೂ ಜೆಡಿಎಸ್​​ಗೆ ಉಪಮೇಯರ್ ಸ್ಥಾನ ಫಿಕ್ಸ್ ಆಗಿದೆ.

ತೀವ್ರ ಪೈಪೋಟಿ ನಡುವೆ ಇಂಧನ ಸಚಿವ ಡಿಕೆ ಶಿವಕುಮಾರ್ ಪರಮಾಪ್ತ ಡಿಜೆಹಳ್ಳಿ ಕಾರ್ಪೊರೇಟರ್ ಸಂಪತ್ ರಾಜ್ ಹೆಸರನ್ನು ಮೇಯರ್ ಸ್ಥಾನಕ್ಕೆ ಫೈನಲ್ ಮಾಡುವಂತೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ಇದುವರೆಗೂ ಸುಮ್ಮನಿದ್ದ್ದ ಬಿಜೆಪಿ ಕೊನೇ ಕ್ಷಣದಲ್ಲಿ ಜೆಡಿಎಸ್-ಕಾಂಗ್ರೆಸ್​ಗೆ ಶಾಕ್ ನೀಡಿದೆ. ಮುನಿಸ್ವಾಮಿ ಅವರನ್ನು ಮೇಯರ್ ಅಭ್ಯರ್ಥಿಯಾಗಿ, ಮಮತ ವಾಸುದೇವ್ ಅವರನ್ನು ಉಪಮೇಯರ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.

ಬಿಬಿಎಂಪಿ ನಂಬರ್​​​​ ಗೇಮ್​​​

ಒಟ್ಟು ಮತಗಳು- 266

ಮ್ಯಾಜಿಕ್ ನಂಬರ್- 134

ಪಕ್ಷಗಳ ಬಲಾಬಲ

ಇನ್ನೂ ಪಾಲಿಕೆಯ 198 ಸದಸ್ಯರು ಸೇರಿದಂತೆ ಒಟ್ಟು 266 ಮಂದಿ ಮತದಾನ ಮಾಡಲಿದ್ದಾರೆ. ಮ್ಯಾಜಿಕ್ ನಂಬರ್ 134, ಪಕ್ಷಗಳ ಬಲಾಬಲ ನೋಡುವುದಾದರೆ ಕಾಂಗ್ರೆಸ್ 109, ಜೆಡಿಎಸ್ 24, ಬಿಜೆಪಿ 126 ಸದಸ್ಯರನ್ನ ಹೊಂದಿದರೆ. 7 ಮಂದಿ ಪಕ್ಷೇತರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಬೆಳಗ್ಗೆ 8ರಿಂದ ಚುನಾವಣಾ ಪ್ರಕ್ರಿಯೆಗಳು ನಡೆಯಲಿದ್ದು.. 11.30ಕ್ಕೆ ಮತದಾನ ಕೈ ಎತ್ತುವ ಮೂಲಕ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಒಟ್ಟಿನಲ್ಲಿ , ಯಾರಾಗ್ತಾರೆ ಮೇಯರ್, ಉಪಮೇಯರ್ ಎನ್ನುವ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ.