ಗಾರ್ಬೇಜ್ ಸಿಟಿ ಅನ್ನಿಸಿಕೊಂಡಿದ್ದ ಬೆಂಗಳೂರು ಈಗ ಪಾತ್ ಹೋಲ್ ಸಿಟಿಯಾಗಿದೆ. ರಸ್ತೆ ಗುಂಡಿಗಳಿಗೆ ಈಗಾಗಲೇ ಹಲವರು ಬಲಿಯಾಗಿದ್ದಾರೆ. 

ಬೆಂಗಳೂರು(ಅ.20): ಗಾರ್ಬೇಜ್ ಸಿಟಿ ಅನ್ನಿಸಿಕೊಂಡಿದ್ದ ಬೆಂಗಳೂರು ಈಗ ಪಾತ್ ಹೋಲ್ ಸಿಟಿಯಾಗಿದೆ. ರಸ್ತೆ ಗುಂಡಿಗಳಿಗೆ ಈಗಾಗಲೇ ಹಲವರು ಬಲಿಯಾಗಿದ್ದಾರೆ. 

ಈಗ ಏಕಾಏಕಿ ಎಚ್ಚೆತ್ತುಕೊಂಡಿರುವ ಮಾನ್ಯ ಬೆಂಗಳೂರು ಅಭಿವೃದ್ಧಿ ಸಚಿವ ಜಾರ್ಜ್ ಮತ್ತು ಮೇಯರ್ ಸಂಪತ್ ರಾಜ್ ಮಧ್ಯ ರಾತ್ರಿ 2-00 ಗಂಟೆಗೆ ರಸ್ತೆ ಗುಂಡಿಗಳ ಮುಚ್ಚುವ ಹಾಗೂ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದರು.

ಹಿರಿಯ ಅಧಿಕಾರಿಗಳು ಮತ್ತು ಮುಖ್ಯ ಅಭಿಯಂತರರೊಂದಿಗೆ ಚಾಲುಕ್ಯ ಹೋಟೆಲ್ ಮುಂದೆ ಸೋಫಿಯಾ ಶಾಲೆ ಎದುರುಗಿನ ರಸ್ತೆಗೆ ಡಾಂಬರಿಕರಣವನ್ನ ಖುದ್ದು ಪರಿಶೀಲಿಸಿದ್ರು.