ದೇವನಹಳ್ಳಿ ನವಯುಗ ಟೋಲ್‌ ಶುಲ್ಕ ಹೆಚ್ಚಳದ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಟೋಲ್‌ ಮಾರ್ಗದ ಮೂಲಕ ಸಂಚರಿಸುವ ಹವಾನಿಯಂತ್ರಿತ(ಎಸಿ) ವಾಯುವಜ್ರ ಬಸ್‌ ಬಳಕೆದಾರರ ಶುಲ್ಕವನ್ನು 1 ರೂ ಹೆಚ್ಚಿಸಿದೆ.

ಬೆಂಗಳೂರು (ಏ. 02): ದೇವನಹಳ್ಳಿ ನವಯುಗ ಟೋಲ್‌ ಶುಲ್ಕ ಹೆಚ್ಚಳದ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಟೋಲ್‌ ಮಾರ್ಗದ ಮೂಲಕ ಸಂಚರಿಸುವ ಹವಾನಿಯಂತ್ರಿತ(ಎಸಿ) ವಾಯುವಜ್ರ ಬಸ್‌ ಬಳಕೆದಾರರ ಶುಲ್ಕವನ್ನು .1 ಹೆಚ್ಚಿಸಿದೆ.

ಟೋಲ್‌ನಲ್ಲಿ ಈ ಹಿಂದೆ ಬಸ್‌ಗೆ ಏಕಮುಖ ಸಂಚಾರಕ್ಕೆ .270 ಇದ್ದ ಶುಲ್ಕವನ್ನು .280ಕ್ಕೆ ಏರಿಸಲಾಗಿದೆ. ದಿನಕ್ಕೆ 2 ಸಿಂಗಲ್‌ ಜರ್ನಿಗೆ .405 ಇದ್ದ ಶುಲ್ಕವನ್ನು .420 ಹಾಗೂ ಮಾಸಿಕ ಪಾಸ್‌ ಶುಲ್ಕವನ್ನು .8,945 ರಿಂದ .9,330ಕ್ಕೆ ಹೆಚ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಏ.1ರಿಂದ ಅನ್ವಯವಾಗುವಂತೆ ವಾಯುವಜ್ರ ಬಸ್‌ ಬಳಕೆದಾರರ ಶುಲ್ಕವನ್ನು .13 ರಿಂದ .14ಕ್ಕೆ ಏರಿಸಿದೆ.

ಸಾಮಾನ್ಯ ಬಸ್‌ಗಳ ಬಳಕೆದಾರರ ಶುಲ್ಕ ಹಿಂದಿನಂತೆಯೇ (.6) ಮುಂದುವರಿಸಿದೆ. ಈ ದರ ದೈನಂದಿನ, ಮಾಸಿಕ ಹಾಗೂ ಇತರೆ ಪಾಸುದಾರರಿಗೆ ಅನ್ವಯವಾಗವಾಲಿದೆ. ಆದರೆ ವಿದ್ಯಾರ್ಥಿ ರಿಯಾಯಿತಿ ಹಾಗೂ ಅಂಗವಿಕಲ ಪಾಸುದಾರರಿಗೆ ಪರಿಷ್ಕೃತ ಶುಲ್ಕ ಅನ್ವಯವಾಗುವುದಿಲ್ಲ. ಇನ್ನು ಮುಂದೆ ವಾಯುವಜ್ರ ಮಾಸಿಕ ಪಾಸ್‌ ಪಡೆಯುವವರು ಪಾಸ್‌ ಶುಲ್ಕದ ಜತೆಗೆ .420 ಬಳಕೆದಾರರ ಶುಲ್ಕ ಪಾವತಿಸಬೇಕು ಎಂದು ನಿಗಮ ತಿಳಿಸಿದೆ.