ಬೆಂಗಳೂರು (ಸೆ.21): ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಬಿಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಬಿಬಿಎಂಪಿ ಕಾರ್ಪೊರೇಟರ್’ಗಳು ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ಕಾವೇರಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿ ರಾಜೀನಾಮೆ ನೀಡಲು ಕಾರ್ಪೊರೇಟರ್’ಗಳು ತೀರ್ಮಾನಿಸಿದ್ದಾರೆ.
ರಾಜೀನಾಮೆ ನೀಡಲಿರುವ ಕಾಂಗ್ರೆಸ್ ಕಾರ್ಪೊರೇಟರ್ಗಳು ನಾಳೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ಗೆ ರಾಜೀನಾಮೆ ಸಲ್ಲಿಸಲಿದ್ದಾರೆ.
ಯಶವಂತಪುರ ವಾರ್ಡ್ ಸದಸ್ಯ ಜಿ.ಕೆ.ವೆಂಕಟೇಶ್, ಲಕ್ಷ್ಮಿದೇವಿ ನಗರ ವಾರ್ಡ್’ನ ಎಂ.ವೇಲು ನಾಯಕರ್, ಕೊಟ್ಟಿಗೆಪಾಳ್ಯ ವಾರ್ಡ್’ನ ಜಿ.ಮೋಹನ್ ಕುಮಾರ್ ಹಾಗೂ ಜಾಲಹಳ್ಳಿ ವಾರ್ಡ್ ಶ್ರೀನಿವಾಸ ಮೂರ್ತಿ ನಾಳೆ ರಾಜೀನಾಮೆ ನೀಡಲಿದ್ದಾರೆ.
