ಬಸವರಾಜುಗೆ ತುಮಕೂರು ಲೋಕಸಭಾ ಬಿಜೆಪಿ ಟಿಕೆಟ್

Basavaraju Get Lok Sabha Ticket From Tumkur
Highlights

ಮಾಜಿ ಸಂಸದ ಜಿ.ಎಸ್.ಬಸವರಾಜು ಅವರೇ ಮುಂಬರುವ ಲೋಕಸಭಾ ಚುನಾವಣಾ ಅಭ್ಯರ್ಥಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. 

ತುಮಕೂರು: ಮಾಜಿ ಸಂಸದ ಜಿ.ಎಸ್.ಬಸವರಾಜು ಅವರೇ ಮುಂಬರುವ ಲೋಕಸಭಾ ಚುನಾವಣಾ ಅಭ್ಯರ್ಥಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. 

ತುಮಕೂರಿನಲ್ಲಿ ನಡೆದ ಪ್ರಚಾರ ಸಭೆ ಯಲ್ಲಿ ಅವರು, ನಿಮ್ಮೆಲ್ಲರ ಆಶೀರ್ವಾದದಿಂದ ಮುಂದೆ ಸಂಸದರಾಗಲಿರುವ ಜಿ.ಎಸ್.ಬಸವರಾಜು ಅವರೇ ಎಂದೇ ಭಾಷಣ ಆರಂಭಿಸಿದರು. ಈ ಮೂಲಕ ಲೋಕಸಭಾ ಚುನಾವಣೆಗೆ ಸೊಗಡು ಶಿವಣ್ಣ ಅವರಿಗೆ ಟಿಕೆಟ್ ಇಲ್ಲ ಎನ್ನುವ ಸಂದೇಶ ರವಾನಿಸಿದರು. ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ತಪ್ಪಿದ ಸೊಗಡು ಶಿವಣ್ಣ ಬೆಂಬಲಿಗರು ಲೋಕಸಭೆ ಟಿಕೆಟ್ ನಿರೀಕ್ಷೆಯಲ್ಲಿದ್ದರು. 

ಎರಡು ವರ್ಷಗಳಿಂದ ಬಿಜೆಪಿ ವರಿಷ್ಠರ ಜೊತೆ ಮುನಿಸಿಕೊಂಡಿದ್ದ ಶಿವಣ್ಣ ಪಕ್ಷದ ಚಟುವಟಿಕೆಯಿಂದ ದೂರವೇ ಉಳಿದಿದ್ದರು. ಭಾನುವಾರವೂ ಅವರು ಕಾರ್ಯ ಕ್ರಮಕ್ಕೆ ಗೈರಾಗಿದ್ದರು. ಈಗ ಮಾಜಿ ಸಂಸದರಿಗೆ ಟಿಕೆಟ್ ಘೋಷಿಸಿರುವುದು ಜಿಲ್ಲಾ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.

loader