ರಾಜ್ಯ ಸರ್ಕಾರ ಬಿಜೆಪಿ ವಿರುದ್ಧ ಎಸಿಬಿ ಅಸ್ತ್ರ ಪ್ರಯೋಗಿಸಿದೆ.ಹಳೇ ಕೇಸ್ಗಳಿಗೆ ಮರು ಜೀವ ಕೊಡುತ್ತಿದೆ. ಆದರೆ, ರಾಜ್ಯ ಸರ್ಕಾರ ರೀ ಓಪನ್ ಮಾಡಿದ ಡಿನೋಟಿಫಿಕೇಷನ್ ಪ್ರಕರಣವೊಂದರಲ್ಲಿ ಕೆಎಎಸ್ ಅಧಿಕಾರಿಯೊಬ್ಬರು ಸರ್ಕಾರದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಆಶ್ಚರ್ಯ ಏನ್ ಗೊತ್ತಾ.. ಇದೇ ಅಧಿಕಾರಿಗೆ ರಾಜ್ಯ ಸರ್ಕಾರ ಪ್ರಮೋಷನ್ಗೆ ಶಿಫಾರಸ್ಸು ಮಾಡಿತ್ತು. ಈ ವಿಚಿತ್ರ ರಹಸ್ಯದ EXCLUSIVE ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಆ.22): ಶಿವರಾಮ ಕಾರಂತ ಬಡಾವಣೆಯ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಕೆಎಎಸ್ ಅಧಿಕಾರಿ ಬಸವರಾಜೇಂದ್ರ ಎಸಿಬಿ ಹಾಗೂ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.. ಆಶ್ಚರ್ಯ ಏನ್ ಗೊತ್ತಾ ಇದೇ ಅಧಿಕಾರಿ ಪರ ವಕಾಲತ್ತು ವಹಿಸಿತ್ತು. ಇದೇ ಸಿದ್ದರಾಮಯ್ಯ ಸರ್ಕಾರ. 1998ನೇ ಸಾಲಿನಲ್ಲಿ ಅಸಿಸ್ಟಂಟ್ ಕಮಿಷನರ್ ಹುದ್ದೆಗೆ ನೇಮಕವಾಗಿದ್ದ ಬಸವರಾಜೇಂದ್ರ ಅವ್ರು, ಈ ಬ್ಯಾಚ್ನಲ್ಲಿ ಅಕ್ರಮ ಫಲಾನುಭವಿಯಾಗಿದ್ದರು ಎಂದು ಸಿಐಡಿ ಮತ್ತು ಹೈಕೋರ್ಟ್ ರಚಿಸಿದ್ದ ಸತ್ಯಶೋಧನಾ ಸಮಿತಿ ವರದಿ ನೀಡಿತ್ತು. ಪರಿಷ್ಕೃತ ಪಟ್ಟಿಯಲ್ಲಿ ಬಸವರಾಜೇಂದ್ರ ಅವರಿಗೆ ಎ.ಸಿ.ಹುದ್ದೆಯಿಂದ ಕೆಳಗಿಳಿಸಿ ಕಮರ್ಷಿಯಲ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ನಲ್ಲಿ ಅಸಿಸ್ಟಂಟ್ ಕಂಟ್ರೋಲರ್ ಹುದ್ದೆ ನೀಡಿತ್ತು. ಕೆಪಿಎಸ್ಸಿ ಸಲ್ಲಿಸಿದ್ದ ಪರಿಷ್ಕೃತ ಪಟ್ಟಿಯನ್ನು ಹೈಕೋರ್ಟ್ ಒಪ್ಪಿಕೊಂಡಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧೀನದಲ್ಲೇ ಬರೋ ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆ ಮಾತ್ರ ಬಸವರಾಜೇಂದ್ರ ಅವರ ಹುದ್ದೆಯನ್ನು ಬದಲಿಸಲಿಲ್ಲ.
ಹುದ್ದೆ ಬದಲಿಸೋ ಬದಲು ಪ್ರಮೋಷನ್ಗೆ ಶಿಫಾರಸು
ಹುದ್ದೆ ಬದಲಿಸಲಿಲ್ಲ ಸರಿ, ಅಲ್ಲಿಗೆ ಬಿಡಲಿಲ್ಲ. ಸರ್ಕಾರ ಐಎಎಸ್ ಹುದ್ದೆಗೆ ಪ್ರಮೋಷನ್ ಕೊಡಲು ಯುಪಿಎಸ್'ಸಿಗೆ ಮೂರ್ನಾಲ್ಕು ತಿಂಗಳ ಹಿಂದೆಯೇ ಶಿಫಾರಸು ಮಾಡಿದೆ. ಇದು ಅಚ್ಚರಿಗೆ ಕಾರಣವಾಗಿದೆ.
ಅಕ್ರಮವಾಗಿ 51 ಅಂಕ ಪಡೆದಿದ್ದ ಬಸವರಾಜೇಂದ್ರ
1998ನೇ ಸಾಲಿನ ನೇಮಕಾತಿಯಲ್ಲಿ ನಡೆದಿದ್ದ ವಿವಿಧ ಅಕ್ರಮಗಳ ಕುರಿತು ತನಿಖೆ ನಡೆಸಿದ್ದ ಸಿಐಡಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ವರದಿಯನ್ನು ಸಲ್ಲಿಸಿತ್ತು. ಅಲ್ಲದೆ, ಹೈಕೋರ್ಟ್ ರಚಿಸಿದ್ದ ಸತ್ಯಶೋಧನಾ ಸಮಿತಿ ಕೂಡ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಆರಂಭದ ವರ್ಷದಲ್ಲೇ ಹೈಕೋರ್ಟ್ಗೆ ವರದಿ ಸಲ್ಲಿಸಿತ್ತು. ಬಸವರಾಜೇಂದ್ರ ಅವರು ಅಕ್ರಮವಾಗಿ 51 ಅಂಕಗಳನ್ನು ಪಡೆದಿದ್ದರು ಎಂದು ಸಿಐಡಿ ಮತ್ತು ಸತ್ಯಶೋಧನಾ ಸಮಿತಿ ವರದಿಯಲ್ಲಿ ವಿವರವಾಗಿ ಹೇಳಿತ್ತು. ಯಡಿಯೂರಪ್ಪ ಅವರ ನಂತ್ರ ಮುಖ್ಯಮಂತ್ರಿ ಆಗಿದ್ದ ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಅವಧಿಯಲ್ಲಿ ಒಂದೇ ಒಂದು ಕ್ರಮ ವಹಿಸಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರವೂ ವರದಿ ಆಧರಿಸಿ ಕ್ರಮ ವಹಿಸಲಿಲ್ಲ. ಆದರೀಗ ಇದೇ ಅಧಿಕಾರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿದ್ದಾರೆ..
