ಕೈಕಟ್ಟಿ ಕುಳಿತುಕೊಳ್ಳುವ ಸಭಾಪತಿ ಸ್ಥಾನ ಬೇಕಿಲ್ಲ: ಹೊರಟ್ಟಿ

Basavaraj Horatti unhappy with speaker post
Highlights

ಸಚಿವ ಸ್ಥಾನ ಕೈತಪ್ಪಿದರ ಬಗ್ಗೆ ಬೇಸರವಾಗಿದೆ ಆದರೆ ಕೈಕಟ್ಟಿ ಕುಳಿತುಕೊಳ್ಳುವ ಸಭಾಪತಿ ಸ್ಥಾನ ನನಗೆ ಬೇಕಿಲ್ಲ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ. ಬಸವರಾಜ್ ಹೊರಟ್ಟಿ ಏನು ಹೇಳಿದರು ಮುಂದೆ ಓದಿ..

ಬೆಳಗಾವಿ: ಸಚಿವ ಸ್ಥಾನ ಕೈತಪ್ಪಿದರ ಬಗ್ಗೆ ಬೇಸರವಾಗಿದೆ ಆದರೆ ಕೈಕಟ್ಟಿ ಕುಳಿತುಕೊಳ್ಳುವ ಸಭಾಪತಿ ಸ್ಥಾನ ನನಗೆ ಬೇಕಿಲ್ಲ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ. 

ದೇವೇಗೌಡರು ನನಗೆ ಸಭಾಪತಿ ಹುದ್ದೆನೀಡುವ ಬಗ್ಗೆ ಕಾರ್ಯಕರ್ತರ ಎದುರು ಹೇಳಿಕೊಂಡಿದ್ದಾರೆಯೇ ವಿನಃ ನನ್ನ ಮುಂದೆ ಹೇಳಿಲ್ಲ ಇದನ್ನು ಮಾಧ್ಯಮದಲ್ಲಿ ಗಮನಿಸಿದ್ದೇನೆ. ರಾಜ್ಯದಲ್ಲಿ ಶಿಕ್ಷಕರ ಸಮಸ್ಯೆ ಬಹಳಷ್ಟಿವೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಶಿಕ್ಷಣ ಸಚಿವನಾಗುವ ಬಯಕೆ ಹೊಂದಿದ್ದೆ ಎಂದು ಹೇಳಿದರು.

 ಹಲವು ವರ್ಷಗಳಿಂದ ಶಿಕ್ಷಕರು ನನ್ನನ್ನು ಆಯ್ಕೆಮಾಡುತ್ತಿದ್ದು, 38 ವರ್ಷಗಳಿಂದ ಜೆಡಿಎಸ್‍ನಲ್ಲಿದ್ದೇನೆ. ಈ ಹಿಂದೆ ಸಚಿವನಾಗಿಯೂ ಕೆಲಸಮಾಡಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆಯಿಲ್ಲ ಆದರೂ ಸಚಿವ ಸ್ಥಾನ ತಪ್ಪಿದೆ ಎಂದರು.

ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರಕಾರ ರಚನೆಯಾದ ನಂತರ ಶಾಸಕರ ಬಂಡಾಯ ಮುಂದುವರಿಯುತ್ತಲೇ ಇದೆ. ಎರಡೂ ಪಕ್ಷದಲ್ಲಿಯೂ ಸಚಿವ ಸ್ಥಾನ ವಂಚಿತರು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ.

loader