ವಿಜಯಪುರ, [ಮೇ.21] ಸಿದ್ದರಾಮಯ್ಯ ದುರಹಂಕಾರಿ, ದಿನೇಶ್ ಫ್ಲಾಪ್​ ಶೋ ಎಂದು ಸ್ವಪಕ್ಷದ ನಾಯಕರ ವಿರುದ್ಧ ಶಿವಜಿನಗರ ಕಾಂಗ್ರೆಸ್ ಶಾಸಕ ಬಹಿರಂಗವಾಗಿ ಗುಡುಗಿದ್ದು,  ಕೈ ಪಾಳಯವನ್ನು ಇನ್ನಿಲ್ಲದಂತೆ ಕಂಗಾಲಾಗಿಸಿದೆ. 

ಇನ್ನು  ರೋಷನ್ ಬೇಗ್ ಅವರು ಆಕ್ರೋಶದ ಕಟ್ಟೆ ಹೊಡೆಯಲು ಕಾರಣವೇನು ಎನ್ನುವುದನ್ನು ವಿಜಯಪು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಿಚ್ಚಿಟ್ಟಿದ್ದಾರೆ.  ವಿಜಯಪುರದಲ್ಲಿಂದು [ಮಂಗಳವಾರ] ಸುವರ್ಣ ನ್ಯೂಸ್ ಜತೆ ಮಾತನಾಡಿದ ಯತ್ನಾಳ್,  ಜಮೀರ್ ಅಹ್ಮದ್ ಗೆ ಸಚಿವ ಸ್ಥಾನ ನೀಡಿದಕ್ಕೆ ರೋಶನ್ ಬೇಗ್ ಆಕ್ರೋಶಗೊಂಡಿದ್ದಾರೆ ಎಂದು ಹೇಳಿದರು.

ಸಿದ್ದುಗೆ ಹಿಗ್ಗಾಮುಗ್ಗಾ ಗುದ್ದಿದ ರೋಷನ್ ಬೇಗ್! ಕಾಂಗ್ರೆಸ್‌ಗೆ ಗುಡ್ ಬೈ?

ರೋಶನ್ ಬೇಗ ಸಣ್ಣ ಹುಡುಗ ಅಲ್ಲ. 30-40 ವರ್ಷದ ಅನುಭವಿ, ಕಾಂಗ್ರೆಸ್ ನಲ್ಲಿಯ ಪರಿಸ್ಥಿತಿ ಎಂದು ತೋರಿಸಿದ್ದಾರೆ. ರೋಶನ್ ಬೇಗ ಸಿಡಿದೆದ್ದಿರುವ ಹಿಂದೆ ಮೈತ್ರಿ ಸರ್ಕಾರ ಪತನದ ಸ್ಪಷ್ಟ ಸಂದೇಶ. ಈ ಹೇಳಿಕೆಯಿಂದ ಹಿಂದೆ ಸರಿಯಬಾರದು. ಕ್ಷಮೆ ಕೇಳಿದರೆ ರೋಶನ್ ಬೇಗ ಜೀರೋ ಆಗ್ತಾರೆ ಎಂದು ಹೇಳಿದರು.

ಸಿದ್ದರಾಮಯ್ಯ ದುರಹಂಕಾರಿ, ದಿನೇಶ್ ಫ್ಲಾಪ್​ ಶೋ ಹೇಳಿಕೆ, ರೋಷನ್ ಬೇಗ್​ಗೆ ಸಂಕಷ್ಟ..!

ಯತ್ನಾಳ್ ಹೇಳಿರುವುದು ಒಂದು ರೀತಿಯಲ್ಲಿ ಸತ್ಯವೇ. ಯಾಕಂದ್ರೆ ಜೆಡಿಎಸ್ ಹಾಗು ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ರೋಷನ್ ಬೇಗ್ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು,  ಮುಸ್ಲಿಂ ಕೋಟಾದಲ್ಲಿ ನನಗೆ ಸಚಿವ ಸ್ಥಾನ ಕೊಡಿ ಎಂದು ಬೇಡಿಕೆ ಇಟ್ಟಿದ್ದರು. 

ಆದ್ರೆ, 2018ರ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್ ನಿಂದ ಬಂದ ಜಮೀರ್ ಅಹ್ಮದ್ ಖಾನ್ ಅವರಿಗೆ ಮಂತ್ರಿಗಿರಿ ಕೊಟ್ಟಿದ್ದರು. ಇದ್ರಿಂದ ಅಸಮಾಧನಗೊಂಡಿರುವ ರೋಷನ್ ಬೇಗ್, ಅಂದಿನಿಂದ ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ರೋಷನ್ ಬೇಗ್ ಮುನಿಸಿಕೊಮಡಿದ್ದರು. ಇದೀಗ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ ಅಷ್ಟೇ.