ಸೈನಿಕರಿಗೆ ಬೆಳ್ಳಿ ಬ್ಲೇಡ್: ಉದ್ಧವ್ ಸೇವೆಗೆ ಎಲ್ಲರೂ ಕ್ಲೀನ್ ಬೋಲ್ಡ್!

Barber in Buldhana offers free shaving service to soldiers using special silver razor
Highlights

ಈ ಕ್ಷೌರಿಕನಿಗೆ ಸೈನಿಕರೆಂದರೇ ವಿಶೇಷ ಗೌರವ

ಸೈನಿಕರಿಗೆ ಉಚಿತವಾಗಿ ಕ್ಷೌರ ಮಾಡುವ ಉದ್ಧವ್

ಬೆಳ್ಳಿ ಬ್ಲೇಡ್ ನಿಂದ ಸೈನಿಕರಿಗೆ ಶೇವಿಂಗ್

ಮಹಾರಾಷ್ಟ್ರದ ಬುಲ್ದಾನಾದ ಉದ್ಧವ್ ಗಡೇಕರ್   
 

ಬುಲ್ದಾನಾ(ಜೂ.30): ನಮ್ಮ ಸೈನಿಕರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ತಮ್ಮದೇ ಆದ ರೀತಿಯಲ್ಲಿ ಪ್ರತಿಯೊಬ್ಬರೂ ಗೌರವ ಸಲ್ಲಿಸುತ್ತಾರೆ. ಆದರೆ ಮಹಾರಾಷ್ಟ್ರದ ಬುಲ್ದಾನಾ ದಲ್ಲಿರುವ ಉದ್ಧವ್ ಗಡೇಕರ್  ನಿವೃತ್ತ ಸೈನಿಕರಿಗೆ ಗೌರವ ಸಲ್ಲಿಸುವ ರೀತಿಯೇ ಬೇರೆ.

ವೃತ್ತಿಯಿಂದ ಕ್ಷೌರಿಕರಾಗಿರುವ ಉದ್ಧವ್ ಗಡೇಕರ್ ಅವರಿಗೆ ಗಡಿ ಕಾಯುವ ಯೋಧರೆಂದರೆ ಎಲ್ಲಿಲ್ಲದ ಗೌರವ ಮತ್ತು ಪ್ರೀತಿ. ಇದೇ ಕಾರಣಕ್ಕೆ ಪ್ರತೀ ಭಾನುವಾರ ತಮ್ಮ ಅಂಗಡಿಗೆ ಬರುವ ನಿವೃತ್ತ ಸೈನಿಕರಿಗೆ ಉಚಿತವಾಗಿ ಹೇರ್ ಕಟ್ ಮತ್ತು ಶೇವಿಂಗ್ ಮಾಡುತ್ತಾರೆ ಉದ್ಧವ್.

ಇಷ್ಟೇ ಅಲ್ಲ, ನಿವೃತ್ತ ಸೈನಿಕರಿಗೆ ಕ್ಷೌರ ಮಾಡಲೆಂದೇ ಬೆಳ್ಳಿಯಿಂದ ತಯಾರಿಸಿದ ವಿಶೇಷ ಬ್ಲೇಡ್ ನ್ನು ಉದ್ಧವ್ ಬಳಸುತ್ತಾರೆ. ೧೫ ಸಾವಿರ ರೂ. ಬೆಲೆ ಬಾಳುವ ವಿಶೇಷ ಬೆಳ್ಳಿಯ ಬ್ಲೇಡ್ ನಿಂದ ಮಾತ್ರ ಉದ್ಧವ್ ಸೈನಿಕರಿಗೆ ಕ್ಷೌರ ಮಾಡುತ್ತಾರೆ. 

ಉದ್ಧವ್ ದೇಶ ಸೇವೆ ಇದಿಷ್ಷಕ್ಕೆ ಸೀಮಿತವಾಗಿಲ್ಲ. ತಮ್ಮ ಅಂಗಡಿಗೆ ಕ್ಷೌರಕ್ಕಾಗಿ ಬರುವ ಅಂಧ ಮತ್ತು ನಿರ್ಗತಿಕರಿಗೆ ಉದ್ಧವ್ ಉಚಿತವಾಗಿ ಹೇರ್ ಕಟ್ ಮತ್ತು ಶೇವಿಂಗ್ ಮಾಡುತ್ತಾರೆ. ತಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ದೇಶದ ಮತ್ತು ಜನರ ಸೇವೆ ಮಾಡಬೇಕು ಎಂಬುದು ತಮ್ಮ ಬಯಕೆ ಎನ್ನುತ್ತಾರೆ ಉದ್ಧವ್.

loader