ಕುಡಿದ ಮತ್ತಿನಲ್ಲಿ ಬಾರ್ ಮಾಲಿಕನ ಮಗನ ಮೇಲೆ ಪುಂಡರ ಹಲ್ಲೆ

Bar Fighting in  Anekal Bar
Highlights

ಬಾರ್ ನಲ್ಲಿ ಕುಡಿದು ಮಟಮಟ ಮಧ್ಯಾಹ್ನ ಕುಡಿದ ಮತ್ತಿನಲ್ಲಿ  ಪುಂಡರು ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ನೆಲಮಂಗಲ ತಾಲೂಕಿನ ಡಾಬಸ್‌ಪೇಟೆಯ ಸಂದ್ಯಾಶ್ರೀ ಬಾರ್ ನಲ್ಲಿ ಈ ಘಟನೆ ನಡೆದಿದೆ.  ನಾಲ್ಕು ಜನ ಯವಕರು ಬಾರ್ ಮಾಲೀಕನ ಮಗನ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ.  

ನೆಲಮಂಗಲ (ಜೂ. 21):  ಬಾರ್ ನಲ್ಲಿ ಕುಡಿದು ಮಟಮಟ ಮಧ್ಯಾಹ್ನ ಕುಡಿದ ಮತ್ತಿನಲ್ಲಿ  ಪುಂಡರು ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ನೆಲಮಂಗಲ ತಾಲೂಕಿನ ಡಾಬಸ್‌ಪೇಟೆಯ ಸಂದ್ಯಾಶ್ರೀ ಬಾರ್ ನಲ್ಲಿ ಈ ಘಟನೆ ನಡೆದಿದೆ. 

ನಾಲ್ಕು ಜನ ಯವಕರು ಬಾರ್ ಮಾಲೀಕನ ಮಗನ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ.   ಮಧ್ಯದ ನಿಗದಿತ ದರಕ್ಕಿಂತ ಹೆಚ್ಚು ಹಣ ಕೇಳಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹಲ್ಲೆ ನಡೆಸಿರುವ ದೃಶ್ಯ ಬಾರ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಡಾಬಸ್‌ಪೇಟೆಯ ಜಯರಾಮ್ ಎನ್ನುವವರಿಗೆ ಈ ಬಾರ್ ಸೇರಿದೆ.  ದಾಂದಲೆ ಮಾಡಿದ ಯುವಕರಿಗೆ ಪ್ರಭಾವಿ ರಾಜಕಾರಣಿಗಳ ಶ್ರೀರಕ್ಷೆಯಿದೆ ಎನ್ನಲಾಗಿದ್ದು  ಈ ಕಾರಣಕ್ಕೆ  ರಾಜಕೀಯ ಮುಖಂಡರ ನೇತೃತ್ವದಲ್ಲಿ ಪೊಲೀಸರು ರಾಜಿ-ಸಂಧಾನ ಮಾಡಿದ್ದಾರೆ. 

ಹಲ್ಲೆ ನಡೆಸಿದ್ದರೂ ಡಾಬಸ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೇ ಪುಂಡರ ಪರ ನಿಂತಿದ್ದಾರೆ ಎಂದು ಬಾರ್ ಮಾಲಿಕ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಎಲ್ಲಾ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 


 

loader