ಕೋಮು ಗಲಭೆಯಿಂದ ಕಳೆದ ಎರಡು ತಿಂಗಳಿನಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಕರಾವಳಿ ಪ್ರದೇಶ ಶಾಂತ ಪರಿಸ್ಥಿತಿಗೆ ಮರಳುತ್ತಿದೆ. ಇನ್ನು ಈ ಪ್ರದೇಶದಲ್ಲಿ ನಡೆದ ಕೊಲೆ ಹಾಗೂ ಸದ್ಯದ ಪರಿಸ್ಥಿತಿ ಕುರಿತಾಗಿ ಮಾತನಾಡಿರುವ IGP ಹರಿಶೇಖರನ್ "RSS ಕಾರ್ಯಕರ್ತ ಶರತ್ ಸಾವಿನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತು ಬಂಟ್ವಾಳ ತಾಲೂಕಿನಲ್ಲಿ ಪರಿಸ್ಥಿತಿ ಶಾಂತವಾಗಿದೆ. ಶರತ್ ಹತ್ಯೆ ಪ್ರಕರಣದಲ್ಲಿ ಹಲವು ಮಾಹಿತಿ, ದಾಖಲೆಗಳು, ಫೂಟೇಜ್'​ಗಳನ್ನು ಕಲೆ ಹಾಕಲಾಗಿದೆ. ಗ್ಯಾಂಗ್'ನ್ನು ಬೇಗ ಸೆರೆ ಹಿಡಿಯಲು ಕ್ರಮ ತೆಗೆದುಕೊಂಡಿದ್ದೇವೆ' ಎಂದಿದ್ದಾರೆ.

ಮಂಗಳೂರು(ಜು.09): ಕೋಮು ಗಲಭೆಯಿಂದ ಕಳೆದ ಎರಡು ತಿಂಗಳಿನಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಕರಾವಳಿ ಪ್ರದೇಶ ಶಾಂತ ಪರಿಸ್ಥಿತಿಗೆ ಮರಳುತ್ತಿದೆ. ಇನ್ನು ಈ ಪ್ರದೇಶದಲ್ಲಿ ನಡೆದ ಕೊಲೆ ಹಾಗೂ ಸದ್ಯದ ಪರಿಸ್ಥಿತಿ ಕುರಿತಾಗಿ ಮಾತನಾಡಿರುವ IGP ಹರಿಶೇಖರನ್ "RSS ಕಾರ್ಯಕರ್ತ ಶರತ್ ಸಾವಿನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತು ಬಂಟ್ವಾಳ ತಾಲೂಕಿನಲ್ಲಿ ಪರಿಸ್ಥಿತಿ ಶಾಂತವಾಗಿದೆ. ಶರತ್ ಹತ್ಯೆ ಪ್ರಕರಣದಲ್ಲಿ ಹಲವು ಮಾಹಿತಿ, ದಾಖಲೆಗಳು, ಫೂಟೇಜ್'​ಗಳನ್ನು ಕಲೆ ಹಾಕಲಾಗಿದೆ. ಗ್ಯಾಂಗ್'ನ್ನು ಬೇಗ ಸೆರೆ ಹಿಡಿಯಲು ಕ್ರಮ ತೆಗೆದುಕೊಂಡಿದ್ದೇವೆ' ಎಂದಿದ್ದಾರೆ.

ಬಳಿಕ ಮಾತನಾಡಿದ ಅವರು 'ನಿನ್ನೆ ಕಲ್ಲು ತೂರಾಟ ಪ್ರಕರಣದ ಪೂರ್ಣ ವೀಡಿಯೋ ಇದ್ದು ಶವಯಾತ್ರೆಯ ಪೂರ್ಣ ವೀಡಿಯೋ ಚಿತ್ರೀಕರಣ ಮಾಡಿದ್ದೇವೆ. ಅಲ್ಲದೇ 4 ಕೇಸ್ ದಾಖಲಿಸಿಕೊಂಡಿದ್ದು 15 ಜನರನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸುವವರ ಬಗ್ಗೆಯೂ ಗಮನ ಇರಿಸಲಾಗಿದೆ. ಗ್ರೂಪ್ ಅಡ್ಮಿನ್'​ಗಳು ಹೊಣೆ ಹೊರ ಬೇಕಾಗುತ್ತದೆ. ವದಂತಿ ಹಬ್ಬಿಸುವವರ ವಿರುದ್ದ ಕೂಡಾ ಕ್ರಮ ವಹಿಸಿ ಅಂತಹವರನ್ನು ಬಂಧಿಸುತ್ತೇವೆ' ಎಂದಿದ್ದಾರೆ.