ಮುಂಬೈ(ನ.25): ರದ್ದಾಗಿರುವ 500 ಹಾಗೂ 1000 ರೂ. ನೋಟುಗಳನ್ನು ಆರ್'ಬಿಐ ಕೌಂಟರ್'ಗಳಲ್ಲಿ ಮಾತ್ರ ವಿನಿಮಯ ಮಾಡಲಾಗುತ್ತದೆ. ಕೇಂದ್ರ ಸರ್ಕಾರವು ನ.24 ಮಧ್ಯರಾತ್ರಿಯಿಂದ ದೇಶದ ಎಲ್ಲ ಬ್ಯಾಂಕುಗಳಲ್ಲಿ ನೋಟು ವಿನಿಮಯವನ್ನು ರದ್ದುಗೊಳಿಸಿ ಠೇವಣಿಗೆ ಮಾತ್ರ ಅವಕಾಶ ಕಲ್ಪಿಸಿತ್ತು.

ಸಾರ್ವಜನಿಕರು ಆರ್'ಬಿಐ ಕೌಂಟರ್'ಗಳಲ್ಲಿ ಮಾತ್ರ ರದ್ದಾದ 500 ಹಾಗೂ 1000 ರೂ. ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಇದು ದಿನವೊಂದಕ್ಕೆ ವ್ಯಕ್ತಿಯೊನ್ನರಿಗೆ 2 ಸಾವಿರ ರೂ.ವರೆಗೆ ಮಾತ್ರ ಅವಕಾಶವಿರುತ್ತದೆ. ಆರ್'ಬಿಐ ಮುಖ್ಯ ಕಚೇರಿ ದೇಶದ ವಿವಿಧ ರಾಜ್ಯಗಳಲ್ಲಿರುವ ತನ್ನ ಶಾಖಾ ಕಚೇರಿಗಳಿಗೆ ಅಧಿಸೂಚನೆ ನೀಡಿದೆ.