ಬ್ಯಾಂಕ್ ಉದ್ಯೋಗಿಗಳಿಗೆ ನಾಳೆಯಿಂದ ಸಾಲು ಸಾಲು ರಜೆಗಳು ಶುರುವಾಗಲಿದ್ದು, ಸರಿಯಾಗಿ ಪ್ಯಾನ್ ಮಾಡಿದರೆ ವಾರಾಂತ್ಯವನ್ನು ಕುಟುಂಬ ಸಮೇತ ಎಂಜಾಯ್ ಮಾಡಬಹುದು.
ಬೆಂಗಳೂರು (ಆ.11): ಬ್ಯಾಂಕ್ ಉದ್ಯೋಗಿಗಳಿಗೆ ನಾಳೆಯಿಂದ ಸಾಲು ಸಾಲು ರಜೆಗಳು ಶುರುವಾಗಲಿದ್ದು, ಸರಿಯಾಗಿ ಪ್ಯಾನ್ ಮಾಡಿದರೆ ವಾರಾಂತ್ಯವನ್ನು ಕುಟುಂಬ ಸಮೇತ ಎಂಜಾಯ್ ಮಾಡಬಹುದು.
ಗ್ರಾಹಕರು ಇನ್ನು ನಾಲ್ಕು ದಿನ ಬ್ಯಾಂಕ್ ಕಡೆ ಹೋಗುವುದೇ ಬೇಡ. ನಾಳೆ ಎರಡನೇ ಶನಿವಾರ ರಜೆಯಾದರೆ, ನಾಡಿದ್ದು ಭಾನುವಾರ, 14 ರಂದು ಕೃಷ್ಣ ಜನ್ಮಾಷ್ಟಮಿಗೆ ರಜೆಯಿದ್ದು, 15 ರಂದು ಸ್ವತಂತ್ರ ದಿನಾಚರಣೆಗೆ ರಜೆಯಿದೆ. ಒಟ್ಟಿಗೆ 4 ದಿನಗಳ ಕಾಲ ರಜೆಯ ಮಜಾ ಸವಿಯಬಹುದು.
ಮತ್ತೆ 25 ರಿಂದ ಸಾಲು ರಜೆಗಳು ಪ್ರಾರಂಭವಾಗಲಿದೆ. 25 ಕ್ಕೆ ಗಣೇಶ ಚತುರ್ಥಿ ಪ್ರಯುತ್ಕ ರಜೆಯಿದ್ದರೆ 26 ನಾಲ್ಕನೇ ಶನಿವಾರ, 25 ರಂದು ಎಂದಿನಂತೆ ಭಾನುವಾರ ರಜೆಯಿರುತ್ತದೆ. ಒಟ್ಟಿನಲ್ಲಿ ಈ ತಿಂಗಳು ಕಾರ್ಯದ ದಿನಕ್ಕಿಂತ ರಜೆಗಳೇ ಜಾಸ್ತಿಯಿವೆ.
