ಅಪನಗದೀಕರಣ ಬಳಿಕ ಭಾರತ ಡಿಜಿಟಲೀಕರಣದತ್ತ ಸಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಜೂನ್ - ಅಗಸ್ಟ್ ಅವಧಿಯಲ್ಲಿ ದೇಶದಲ್ಲಿ 358 ಎಟಿಎಂಗಳನ್ನು ಸ್ಥಗಿತಗೊಳಿಸಲಾಗಿದೆ. ಅಪನಗದೀಕರಣ ಬಳಿಕ ಭಾರತ ಡಿಜಿಟಲೀಕರಣದತ್ತ ಸಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಜೂನ್ - ಅಗಸ್ಟ್ ಅವಧಿಯಲ್ಲಿ ದೇಶದಲ್ಲಿ 358 ಎಟಿಎಂಗಳನ್ನು ಸ್ಥಗಿತಗೊಳಿಸಲಾಗಿದೆ.
ನವದೆಹಲಿ(ಅ.29): ಅಪನಗದೀಕರಣ ಬಳಿಕ ಭಾರತ ಡಿಜಿಟಲೀಕರಣದತ್ತ ಸಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಜೂನ್ - ಅಗಸ್ಟ್ ಅವಧಿಯಲ್ಲಿ ದೇಶದಲ್ಲಿ 358 ಎಟಿಎಂಗಳನ್ನು ಸ್ಥಗಿತಗೊಳಿಸಲಾಗಿದೆ.
ಕಳೆದ ನಾಲ್ಕು ವರ್ಷದಲ್ಲಿ ಎಟಿಎಂಗಳ ಅಳವಡಿಕೆ ಪ್ರಮಾಣ ಶೇ. 16.4ರಷ್ಟು ಏರಿಕೆಯಾಗಿದೆ. ಆದರೆ, ಇದೇ ಮೊದಲ ಬಾರಿಗೆ ಎಟಿಎಂ ಪ್ರಮಾಣ ಇಳಿಕೆ ದಾಖಲಿಸಿದೆ. ದೇಶದಲ್ಲಿ ಅತೀ ದೊಡ್ಡ ಎಟಿಎಂ ನೆಟ್‌ವರ್ಕ್ ಹೊಂದಿರುವ ಎಸ್'ಬಿಐ ತನ್ನ ಎಟಿಎಂಗಳ ಸಂಖ್ಯೆಯನ್ನು 59,291 ರಿಂದ ಆಗಸ್ಟ್‌ನಲ್ಲಿ 59,200ಕ್ಕೆ ಇಳಿಸಿದೆ. ಪಿಎನ್'ಬಿ ಎಟಿಎಂಗಳ ಸಂಖ್ಯೆಯನ್ನು 10,502 ರಿಂದ 10,083 ಕ್ಕೆ ಇಳಿಸಿದೆ.
