Asianet Suvarna News Asianet Suvarna News

ಬ್ಯಾಂಕ್ ಗ್ರಾಹಕರೇ ಎಚ್ಚರ:ಲಾಕರ್ ಲೂಟಿಯಾದರೆ ಪರಿಹಾರವಿಲ್ಲ!

ಸಹಜವಾಗಿ ಬರುವ ಉತ್ತರ... ಇದಕ್ಕೆ ಬ್ಯಾಂಕ್‌ಗಳೇ ಜವಾಬ್ದಾರಿ. ನಷ್ಟಕ್ಕೆ ಅವರು ಪರಿಹಾರ ತುಂಬಿಕೊಡಬೇಕು ಎಂಬುದು. ಆದರೆ ನಿಮ್ಮ ಗ್ರಹಿಕೆ ತಪ್ಪಾದೀತು. ಬ್ಯಾಂಕ್ ಲಾಕರ್ ಒಂದು ವೇಳೆ ಲೂಟಿಯಾದರೆ ಅದಕ್ಕೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳು ಜವಾಬ್ದಾರರಲ್ಲವಂತೆ. ಹಾಗಂತ ಮಾಹಿತಿ ಹಕ್ಕು ಅಡಿ ಹಾಕಲಾದ ಅರ್ಜಿಯೊಂದರಿಂದ ತಿಳಿದುಬಂದಿದೆ.

Banks have no liability for loss of valuables in lockers
  • Facebook
  • Twitter
  • Whatsapp

ನವದೆಹಲಿ(ಜೂ.26): ಮನೆಯಲ್ಲಿ ಹಣ, ಒಡವೆ ಅಥವಾ ಮಹತ್ವದ ಕಾಗದಪತ್ರಗಳನ್ನು ಇಟ್ಟರೆ ಕಳವಾಗಬಹುದು ಎಂಬ ಕಾರಣಕ್ಕೆ ಅವುಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಸುರಕ್ಷಿತವಾಗಿ ಇಡಲಾಗುತ್ತದೆ. ಆದರೆ ಲಾಕರ್‌ನಲ್ಲಿಟ್ಟ ವಸ್ತುಗಳೇ ಕಳ್ಳ-ಕಾಕರು, ಡಕಾಯಿತರ ಪಾಲಾದರೆ..?

ಸಹಜವಾಗಿ ಬರುವ ಉತ್ತರ... ಇದಕ್ಕೆ ಬ್ಯಾಂಕ್‌ಗಳೇ ಜವಾಬ್ದಾರಿ. ನಷ್ಟಕ್ಕೆ ಅವರು ಪರಿಹಾರ ತುಂಬಿಕೊಡಬೇಕು ಎಂಬುದು. ಆದರೆ ನಿಮ್ಮ ಗ್ರಹಿಕೆ ತಪ್ಪಾದೀತು. ಬ್ಯಾಂಕ್ ಲಾಕರ್ ಒಂದು ವೇಳೆ ಲೂಟಿಯಾದರೆ ಅದಕ್ಕೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳು ಜವಾಬ್ದಾರರಲ್ಲವಂತೆ. ಹಾಗಂತ ಮಾಹಿತಿ ಹಕ್ಕು ಅಡಿ ಹಾಕಲಾದ ಅರ್ಜಿಯೊಂದರಿಂದ ತಿಳಿದುಬಂದಿದೆ.

‘ಬ್ಯಾಂಕ್ ಲಾಕರ್‌ನಲ್ಲಿನ ಹಣ ಲೂಟಿಯಾದರೆ ಅದಕ್ಕೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳು ಹೊಣೆಯಲ್ಲ ಎಂದು ಲಾಕರ್ ಬಾಡಿಗೆ ಪಡೆಯುವ ವೇಳೆ ಮಾಡಿಕೊಳ್ಳುವ ಒಪ್ಪಂದದಲ್ಲಿ ನಮೂದಿಸಿರಲಾಗುತ್ತದೆ’ ಎಂದು ಆರ್‌ಟಿಐ ಅಡಿ ಕೇಳಲಾದ ಪ್ರಶ್ನೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ 19 ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌'ಗಳು ಸ್ಪಷ್ಟವಾಗಿ ಹೇಳಿವೆ.

ಆದರೆ ಈ ಮಾಹಿತಿಯಿಂದ ಚಕಿತವಾಗಿರುವ ಅರ್ಜಿದಾರ ವಕೀಲ ಕುಶ್ ಕಾಲ್ರಾ ಎಂಬುವವರು, ಇದರ ವಿರುದ್ಧ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಮೊರೆ ಹೋಗಿದ್ದಾರೆ. ‘ಇಂಥ ನಿಯಮಗಳು ಸ್ಪರ್ಧಾತ್ಮಕತೆಗೆ ವಿರುದ್ಧವಾಗಿವೆ. ಮನೆಯಲ್ಲಿ ಅಸುರಕ್ಷಿತ ಎಂಬ ಕಾರಣಕ್ಕೇ ಬ್ಯಾಂಕ್ ಲಾಕರ್‌ನಲ್ಲಿ ಅಮೂಲ್ಯ ವಸ್ತುಗಳನ್ನು ಇಡಲಾಗುತ್ತದೆ. ಆದರೆ ಲಾಕರ್ ಕೂಡ ಕಳವಾದರೆ ಅದರ ಹೊಣೆಯನ್ನು ಬ್ಯಾಂಕ್‌ಗಳು ಹೊರದೇ ಹೋದಾಗ, ಬ್ಯಾಂಕ್ ಲಾಕರ್‌ಗೆ ಸಾಕಷ್ಟು ಶುಲ್ಕ ತುಂಬಿ ವಸ್ತುಗಳನ್ನು ಇಡುವುದರಿಂದ ಏನು ಪ್ರಯೋಜನ’ ಎಂದು ವಾದಿಸಿದ್ದಾರೆ.

Follow Us:
Download App:
  • android
  • ios