Asianet Suvarna News Asianet Suvarna News

ಇಂದು ರಜೆ ಇದ್ದರೂ ಬ್ಯಾಂಕ್, ಅಂಚೆ ಕಚೇರಿ ಓಪನ್!

ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ 500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದಾಗಿನಿಂದಲೂ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಬಿಕ್ಕಟ್ಟು ಎದುರಿಸುವ ನಿಟ್ಟಿನಲ್ಲಿ ಬ್ಯಾಂಕ್  ನೌಕರರ ರಜೆಗಳಿಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ನೋಟು ನಿಷೇಧದ ಬಳಿಕ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಇಂದಿನ ಗುರುನಾನಕ್ ಜಯಂತಿ ಕುರಿತಂತೆ  ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ಅಂಚೆ ಕಚೇರಿ, ಬ್ಯಾಂಕ್ ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ಹೇಳಿದೆ.

Banks And Post offices Will Be Open Today

ನವದೆಹಲಿ(ನ.14): ನೋಟುಗಳ ನಿಷೇಧದ ಹಿನ್ನಲೆಯಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಬ್ಯಾಂಕ್ ನೌಕರರ ರಜೆಗಳಿಗೆ ಕೇಂದ್ರ ಸರ್ಕಾರ ಇಂದಿನ ಗುರುನಾನಕ್ ಜಯಂತಿ ರಜೆಗೂ ಬ್ರೇಕ್ ಹಾಕಿದೆ.

ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ 500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದಾಗಿನಿಂದಲೂ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಬಿಕ್ಕಟ್ಟು ಎದುರಿಸುವ ನಿಟ್ಟಿನಲ್ಲಿ ಬ್ಯಾಂಕ್  ನೌಕರರ ರಜೆಗಳಿಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ನೋಟು ನಿಷೇಧದ ಬಳಿಕ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಇಂದಿನ ಗುರುನಾನಕ್ ಜಯಂತಿ ಕುರಿತಂತೆ  ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ಅಂಚೆ ಕಚೇರಿ, ಬ್ಯಾಂಕ್ ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ಹೇಳಿದೆ.

ಬ್ಯಾಂಕುಗಳು ಬಂದ್ ಆಗುತ್ತವೆ ಎಂದು ಕಂಗಾಲಾಗಿರುವ ಗ್ರಾಹಕರು ಹೊಸ ನೋಟುಗಳಿಗಾಗಿ ಬ್ಯಾಂಕ್ ಗಳಿಗೆ ಮುಗಿಬಿದಿದ್ದು, ಗ್ರಾಹಕರ ಆತಂಕವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬ್ಯಾಂಕ್ ನೌಕರರ ರಜೆಗೆ ಬ್ರೇಕ್ ಹಾಕಿದೆ. ಪ್ರತೀ ವರ್ಷ ನವೆಂಬರ್ 14ರಂದು ಗುರುನಾನಕ್ ಜಯಂತಿ ಆಚರಿಸುವ ನಿಟ್ಟಿನಲ್ಲಿ ಸರ್ಕಾರಿ ನೌಕರರಿಗೆ ರಜೆ ಘೋಷಣೆ ಮಾಡಲಾಗಿತ್ತು. ಆದರೆ ಪ್ರಸ್ತುತ  ಆರ್ಥಿಕ ಬಿಕ್ಕಟ್ಟು ಇರುವ ಹಿನ್ನಲೆಯಲ್ಲಿ ಬ್ಯಾಂಕ್ ನೌಕರರ ರಾಜೆಗೆ ಬ್ರೇಕ್ ಹಾಕಲಾಗಿದೆ.

Latest Videos
Follow Us:
Download App:
  • android
  • ios