ದೇಶಾದ್ಯಂತ ಮುಷ್ಕರದ ಎಚ್ಚರ ನೀಡಿದ ಬ್ಯಾಂಕ್ ಯೂನಿಯನ್‌ಗಳು

First Published 11, May 2018, 8:30 PM IST
Bank Unions Threaten
Highlights
  • ಸಾರ್ವಜನಿಕ ವಲಯದ ಬ್ಯಾಂಕ್‌ ಉದ್ಯೋಗಿಗಳ ಎಚ್ಚರಿಕೆ
  • ಬೇಡಿಕೆ ಈಡೇರಿಸದಿದ್ದರೆ ಮೇ.30ರಿಂದ 2 ದಿನ ಮುಷ್ಕರ 

ನವದೆಹಲಿ [ಮೇ.11]:  ವೇತನ ಹೆಚ್ಚಳದ ವಿಷಯದಲ್ಲಿ ತಮ್ಮ ಬೇಡಿಕೆ ಈಡೇರಿಸದಿದ್ದರೆ ತಿಂಗಳಾಂತ್ಯದಲ್ಲಿ 2 ದಿನಗಳ ಮುಷ್ಕರ ನಡೆಸುವುದಾಗಿ ಸಾರ್ವಜನಿಕ ವಲಯದ ಬ್ಯಾಂಕ್ ಉದ್ಯೋಗಿಗಳು ಎಚ್ಚರಿಕೆ ನೀಡಿದ್ದಾರೆ.

ಭಾರತೀಯ ಬ್ಯಾಂಕುಗಳ ಒಕ್ಕೂಟವು [Indian Banks' Association- IBA] ಪ್ರಸ್ತಾಪಿಸಿರುವ ‘ಅತ್ಯಲ್ಪ’ ಶೇ.2ರಷ್ಟು ವೇತನ ಹೆಚ್ಚಳವನ್ನು ವಿರೋಧಿಸಿ ಮೇ.30ರಿಂದ 2 ದಿನಗಳ ಮುಷ್ಕರ ನಡೆಸುವುದಾಗಿ  ಬ್ಯಾಂಕ್ ಯೂನಿಯನ್‌ಗಳ ಸಂಯುಕ್ತ ವೇದಿಕೆ [United Forum of Bank Unions- UFBU] ಹೇಳಿದೆ.

ಕಳೆದ ಬಾರಿ ಶೇ.15ರಷ್ಟು ವೇತನ ಹೆಚ್ಚಳ ಮಾಡಲಾಗಿತ್ತು. ಹಣದುಬ್ಬರ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಕಡಿಮೆ ವೇತನ ನೀಡುವುದು ಸರಿಯೇ? ಉದ್ಯೋಗಿಗಳಿಗೆ ಸೂಕ್ತವಾದ ವೇತನ ನೀಡದಿರುವುದು ನ್ಯಾಯವೇ? ಎಂದು ಉದ್ಯೋಗಿಗಳು ಪ್ರಶ್ನಿಸಿದ್ದಾರೆ.

1979ರಿಂದ ನಡೆದು ಬಂದಿದ್ದ ಸಂಪ್ರದಾಯದಂತೆ ಎಲ್ಲಾ ಶ್ರೇಣಿಯ ನೌಕರರಿಗೂ ವೇತನ ಹೆಚ್ಚಳ ಮಾಡಬೇಕು ಎಂಬ ಬೇಡಿಕೆಯನ್ನು ಕೂಡಾ ಉದ್ಯೋಗಿಗಳ ಸಂಘವು ಮುಂದಿಟ್ಟಿದೆ. 

ತನ್ನ ವಿವಿಧ ಯೋಜನೆಗಳನ್ನು ಬ್ಯಾಂಕ್ ಮೂಲಕ ಜಾರಿಗೊಳಿಸಲು  ಸರ್ಕಾರ ಬಯಸುತ್ತದೆ.  ಆದರೆ ಉದ್ಯೋಗಿಗಳ ನ್ಯಾಯಯುತ ಬೇಡಿಕೆಗಳ ಬಗ್ಗೆ ಸರ್ಕಾರವು ಘೋರ ನಿರ್ಲಕ್ಷ್ಯ ತಾಳಿದೆ, ಎಂದು ಉದ್ಯೋಗಿಗಳು ಆರೊಪಿಸಿದ್ದಾರೆ.

 (ಸಾಂದರ್ಭಿಕ ಚಿತ್ರ]

 

loader