ಬ್ಯಾಂಕ್‌ಗಳಿಗಿಂತ ಚಿನ್ನದಲ್ಲಿ ಹೂಡಿಕೆ ಮಾಡಿ ಎಂದು ಸಂದೇಶ ನೀಡುವ ಖಾಸಗಿ ಜ್ಯುವೆಲ್ಲರಿ ಜಾಹೀರಾತೊಂದರಲ್ಲಿ ಕಾಣಸಿಕೊಂಡ ನಟ ಅಮಿತಾಭ್ ಬಚ್ಚನ್ ಹಾಗೂ ಅವರ ಪುತ್ರಿಯ ವಿರುದ್ಧ ಬ್ಯಾಂಕಿಂಗ್ ವಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಕೊಚ್ಚಿ: ಬ್ಯಾಂಕ್‌ಗಳಿಗಿಂತ ಚಿನ್ನದಲ್ಲಿ ಹೂಡಿಕೆ ಮಾಡಿ ಎಂದು ಸಂದೇಶ ನೀಡುವ ಖಾಸಗಿ ಜ್ಯುವೆಲ್ಲರಿ ಜಾಹೀರಾತೊಂದರಲ್ಲಿ ಕಾಣಸಿಕೊಂಡ ನಟ ಅಮಿತಾಭ್ ಬಚ್ಚನ್ ಹಾಗೂ ಅವರ ಪುತ್ರಿಯ ವಿರುದ್ಧ ಬ್ಯಾಂಕಿಂಗ್ ವಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಜಾಹೀರಾತಿನಲ್ಲಿ ಬಚ್ಚನ್ ಹಾಗೂ ಅವರ ಪುತ್ರಿಗೆ ಬ್ಯಾಂಕೊಂದರ ಸಿಬ್ಬಂದಿ ಅಸಹಕಾರ ತೋರುವಂತೆ ಚಿತ್ರಿಸಲಾಗಿದೆ. ಬ್ಯಾಂಕಿಂಗ್ ವಲಯದ ಆಕ್ರೋಶದ ಬೆನ್ನಲ್ಲೇ ಯೂಟ್ಯೂಬ್‌ನಲ್ಲಿನ ಜ್ಯುವೆಲ್ಲರಿ ಜಾಹೀರಾತುಗಳನ್ನು ತೆಗೆದು ಹಾಕಲಾಗಿದೆ.
